ಅರವಿಂದ್ ಕೇಜ್ರಿವಾಲ್
ದೇಶ
ದೆಹಲಿ ಸಿಎಂಗೆ ಮತ್ತಷ್ಟು ಸಂಕಷ್ಟ, ಆಪ್ ಶಾಸಕ ಮನೋಜ್ ಕುಮಾರ್ ಬಂಧನ
ದೆಹಲಿ ಪೊಲೀಸರು ಗುರುವಾರ ಆಮ್ ಆದ್ಮಿ ಪಕ್ಷದ ಶಾಸಕ ಮನೋಜ್ ಕುಮಾರ್ ಅವರನ್ನು ಬಂಧಿಸಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್...
ನವದೆಹಲಿ: ದೆಹಲಿ ಪೊಲೀಸರು ಗುರುವಾರ ಆಮ್ ಆದ್ಮಿ ಪಕ್ಷದ ಶಾಸಕ ಮನೋಜ್ ಕುಮಾರ್ ಅವರನ್ನು ಬಂಧಿಸಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವರದಿಗಳ ಪ್ರಕಾರ, ದೆಹಲಿ ಕೊಂಡ್ಲಿ ಶಾಸಕ ಮನೋಜ್ ಕುಮಾರ್ ವಿರುದ್ಧ ದೆಹಲಿ ಪೊಲೀಸರು ಒಟ್ಟು ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ಕುಮಾರ್ ವಿರುದ್ಧ ವಂಚನೆ, ನಕಲಿ ದಾಖಲೆ ಸೃಷ್ಟಿ, ಭದ್ರತಾ ಸಿಬ್ಬಂದಿಗೆ ಪ್ರೇರೇಪಿಸಿದ ಮತ್ತು ಮಹಿಳೆಯೊಂದಿಗೆ ಅಸಭ್ಯ ವರ್ತನೆ ಆರೋಪ ಸೇರಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ.
ನಕಲಿ ಪದವಿ ಪ್ರಮಾಣ ಪತ್ರ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಜೈಲಿಗೆ ಹೋಗಿರುವುದರಿಂದ ಆಪ್ ಪಕ್ಷದಲ್ಲಿ ಈಗಾಗಲೇ ಅಸಮಾಧಾನ ಕಾಣಿಸಿಕೊಂಡಿದೆ. ಇದೀಗ ಪಕ್ಷದ ಮತ್ತೊಬ್ಬ ಶಾಸಕರ ಬಂಧನವಾಗಿರುವುದು ದೆಹಲಿ ಸಿಎಂಗೆ ಹಾಗೂ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ