ವಿಚಾರ ಗಮನಿಸಿಯೇ ಪಾಕ್‍ಗೆ ಬೆಂಬಲ: ಚೀನಾ
ಬೀಜಿಂಗ್: ಉಗ್ರ ಝಕಿವುರ್ ರೆಹಮಾನ್ ಲಖ್ವಿ ಮತ್ತು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಪರವಾಗಿ ಕೈಗೊಂಡ ನಿಲವನ್ನು ಚೀನಾ ಗುರುವಾರ ಸಮರ್ಥಿಸಿಕೊಂಡಿದೆ. ಎಲ್ಲ ಅಂಶಗಳನ್ನು ಗಮನಿಸಿಯೇ ನಾವು ಮುಂಬೈ ದಾಳಿ ರೂವಾರಿ ಝಕೀವುರ್ ರೆಹಮಾನ್ ಲಖ್ವಿ ವಿಚಾರದಲ್ಲಿ ಬೆಂಬಲ ನೀಡಿದ್ದೇವೆ ಎಂದು ಚೀನಾ ಗುರುವಾರ ಹೇಳಿದೆ. ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಯಲ್ಲಿ ಭಾರತವಿಟ್ಟಿದ್ದ ಬೇಡಿಕೆಗೆ ತಡೆಯೊಡ್ಡಿದ್ದನ್ನು ಚೀನಾ ಈ ಮೂಲಕ ಸಮರ್ಥಿಸಿಕೊಂಡಿದೆ. ಈ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚನ್ಯಿಂಗ್, ``ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯನಾಗಿರುವ ಚೀನಾವು ಸತ್ಯಾಸತ್ಯತೆ, ಅಂಕಿ ಅಂಶ ಗಳು ಹಾಗೂ ನ್ಯಾಯಬದಟಛಿವಾಗಿ ನಿರ್ಧಾರ ಕೈಗೊಳ್ಳುತ್ತದೆ. ಲಖ್ವಿ ವಿಚಾರದಲ್ಲೂ ಅಷ್ಟೆ, ಎಲ್ಲ ವಿಚಾರಗಳನ್ನು ಗಮನಿಸಿಯೇ ಪಾಕ್‍ಗೆ ಬೆಂಬಲ ನೀಡಿದ್ದೇವೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ'' ಎಂದಿದ್ದಾರೆ. ಬುಧವಾರವಷ್ಟೇ ಪ್ರಧಾನಿ ಮೋದಿ ಅವರು ಲಖ್ವಿ ವಿಚಾರದಲ್ಲಿ ಚೀನಾ ಕೈಗೊಂಡ ನಿರ್ಧಾರದ ಬಗ್ಗೆ ಪ್ರಶ್ನಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ