ಚೆನ್ನೈ: ಒಂದು ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಕರಾವಳಿ ಸುರಕ್ಷತಾ ಪಡೆಯ ಹೆಲಿಕಾಪ್ಟರ್‌ನ ಡಾಟಾ ರೆಕಾರ್ಡರ್ ಪತ್ತೆಯಾಗಿದೆ ಎಂದು ಶುಕ್ರವಾರ ತಮಿಳುನಾಡು ಕರಾವಳಿ ಪಡೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
'ಚಿದಂಬರಂ-ಕುಡಲೂರು ಕರಾವಳಿಯಲ್ಲಿ ನಾಪತ್ತೆಯಾಗಿದ್ದ ಹೆಲಿಕಾಪ್ಟರ್‌ನ ಅವಶೇಷಗಳು ಹಾಗೂ ಡಾಟಾ ರೆಕಾರ್ಡರ್ ಅನ್ನು ನಾವು ಇಂದು ಪತ್ತೆ ಹಚ್ಚಿದ್ದೇವೆ' ಎಂದು ತಮಿಳುನಾಡು ಕರಾವಳಿ ಪಡೆ ಪೊಲೀಸ್ ಮಹಾನಿರ್ದೇಶಕ ಸತ್ಯ ಪ್ರಕಾಶ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಪೈಲೆಟ್ ಸೇರಿ ಮೂವರು ಚಾಲಕ ಸಿಬ್ಬಂದಿಯನ್ನು ಹೊತ್ತು ಪ್ರಯಾಣಿಸುತ್ತಿದ್ದ ತಮಿಳುನಾಡಿನ ಕರಾವಳಿ ಸುರಕ್ಷತಾ ಪಡೆಯ ಸಿಜೆ-791 ಹೆಲಿಕಾಪ್ಟರ್ ಜೂನ್ 8ರಂದು ನಾಪತ್ತೆಯಾಗಿತ್ತು.
ಚೆನ್ನೈನ ಏರ್ ಬೇಸ್ ನಿಂದ ಪುದುಚೆರಿಗೆ ಹೊರಟಿದ್ದ ಹೆಲಿಕಾಪ್ಟರ್ ಜೂನ್ 8ರಂದು ರಾತ್ರಿ 10.30ರ ವೇಳೆಗೆ ತನ್ನ ಸಂಪರ್ಕ ಕಳೆದುಕೊಂಡಿತ್ತು.
Advertisement