ಇಟಲಿ ಕಂಪನಿಯಿಂದ ಹ್ಯಾಕಿಂಗ್ ಸಾಫ್ಟ್ ವೇರ್ ಖರೀದಿಸಿದ್ದ ಯುಪಿಎ!

ದೂರವಾಣಿ ಕದ್ದಾಲಿಸುವ, ಕಂಪ್ಯೂಟರ್ ಮಾಹಿತಿ ಕದಿಯಲು ನೆರವು ನೀಡುವ ಸಾಫ್ಟ್ ವೇರ್ ಗಳನ್ನು ಪೂರೈಸುವ ಇಟಲಿಯ ವಿವಾದಾತ್ಮಕ...
ಸ್ಪೈವೇರ್
ಸ್ಪೈವೇರ್

ಲಂಡನ್: ದೂರವಾಣಿ ಕದ್ದಾಲಿಸುವ, ಕಂಪ್ಯೂಟರ್ ಮಾಹಿತಿ ಕದಿಯಲು ನೆರವು ನೀಡುವ ಸಾಫ್ಟ್ ವೇರ್ ಗಳನ್ನು ಪೂರೈಸುವ ಇಟಲಿಯ ವಿವಾದಾತ್ಮಕ ಕಂಪನಿಗೆ
ಭಾರತದಲ್ಲೂ ಗ್ರಾಹಕರಿದ್ದಾರಂತೆ! ಭಾರತೀಯ ಗುಪ್ತಚರ ಸಂಸ್ಥೆ, ವಿವಿಧ ರಾಜ್ಯ ಪೊಲೀಸರ ಜತೆಗೆ ಯುಪಿಎ ಸರ್ಕಾರದ ಹೆಸರೂ ಗ್ರಾಹಕರ ಪಟ್ಟಿಯಲ್ಲಿದೆ. ವಿಕಿಲೀಕ್ಸ್ ಬಿಡುಗಡೆ ಮಾಡಿದ ಇ-ಮೇಲ್‍ಗಳಿಂದ ಈ ಸತ್ಯಬಹಿರಂಗವಾಗಿದೆ ಎಂದು ``ಎನ್‍ಡಿಟಿವಿ'' ವರದಿ ಮಾಡಿದೆ.
ಗಿಜ್ಮೊಡೋ ಹ್ಯಾಕಿಂಗ್ ತಂಡ ಕಂಪನಿ ಕಾನೂನು ರೀತಿಯಲ್ಲಿ ದೂರವಾಣಿ ಕದ್ದಾಲಿಸುವ ಸಾಫ್ಟ್ ವೇರ್  ಅಭಿವೃದ್ಧಿಪಡಿಸುತ್ತಿರುವುದಾಗಿ ಹಾಗೂ ಇವುಗಳನ್ನು ವಿಶ್ವಾದ್ಯಂತ ಗುಪ್ತಚರ ಸಂಸ್ಥೆಗಳು, ಪೊಲೀಸರು ಬಳಸುತ್ತಿರುವುದಾಗಿ ಹೇಳಿದೆ. ಆದರೆ, ಅಂತಾರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ಇಟಲಿಯ ಈ ಕಂಪನಿ ಮಾರಾಟ ಮಾಡುತ್ತಿರುವ ಕೆಲ ಸಾಫ್ಟ್ ವೇರ್‍ಗಳನ್ನು ಬ್ಲ್ಯಾಕ್‍ಬೆರ್ರಿ, ಆಂಡ್ರಾಯ್ಡ್  ಆ್ಯ ಪಲ್ ಫೋನ್‍ಗಳಿಗೆ ಮೊದಲೇ ಲೋಡ್ ಮಾಡಬಹುದು. ಈ ತಂತ್ರಜ್ಞಾನ ವನ್ನು ಕಂಪನಿ ರಷ್ಯಾ, ಸೌದಿ ಅರೇಬಿಯಾ ಸೇರಿ ಮಾನವ ಹಕ್ಕುಗಳ ಉಲ್ಲಂಘನೆಗೆ ಹೆಸರುವಾಸಿಯಾದ ಇತರೆ ದೇಶಗಳಿಗೂ ಮಾರಾಟ ಮಾಡಿದೆ. ಇದೊಂದು ವಿಶ್ವದ ಕುಪ್ರಸಿದಟಛಿ ಕಣ್ಗಾವಲು ಸಾಫ್ಟ್ ವೇರ್ ಕಂಪನಿ. ಇದರ ಇ-ಮೇಲ್‍ವೊಂದರಲ್ಲಿ ಭಾರತದಲ್ಲಿ ಕಣ್ಗಾವಲು ಸಾಫ್ಟ್ ವೇರ್, ಸಾಧನಗಳಿಗೆ ಬಹುದೊಡ್ಡ ಮಾರುಕಟ್ಟೆಯಿದೆ ಎಂದೂ ಹೇಳಲಾಗಿದೆ. ಆಘಾತಕಾರಿ ಅಂಶವೆಂದರೆ ಪಾಕ್ ಕೂಡ ಇದರ ಗ್ರಾಹಕ. ವಿಕಿಲೀಕ್ಸ್ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ, ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿಗಳು 2014 ರ ಫೆಬ್ರವರಿಯಲ್ಲಿ ಭಾರತಕ್ಕೆ ಪ್ರವಾಸ ಮಾಡಿದ್ದಾರೆ. ಫೋನ್ ಕದ್ದಾಲಿಕೆ ಸಾಫ್ಟ್ ವೇರ್‍ಗಳನ್ನು ಯಾವ ರೀತಿ ಬಳಸಬೇಕು ಎನ್ನುವ ಕುರಿತು ಪ್ರದರ್ಶನ ನೀಡಿದ್ದಾರೆ. ಇಟಲಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ
ನಿರ್ದೇಶನದಂತೆ ಕಂಪನಿ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿದ್ದರು. ಭಾರತದ ಜತೆಗೆ ವ್ಯವಹಾರ ಕುದುರಿಸಲು ಈ ಕಂಪನಿ ಇಸ್ರೇಲ್ ಮೂಲದ ಕಂಪನಿಯಾದ ಎನ್
ಐಸಿಇ ಜತೆಗೆ ಸಹಭಾಗಿತ್ವ ಮಾಡಿಕೊಂಡಿತ್ತು ಎನ್ನಲಾಗಿದೆ. ಆಂಧ್ರಪೊಲೀಸರು ಮಾತ್ರವಲ್ಲದೆ, ಮಹಾರಾಷ್ಟ್ರ, ದೆಹಲಿ ಮತ್ತು ಕರ್ನಾಟಕ ಪೊಲೀಸರು ಈ ಕಂಪನಿಯ ಹ್ಯಾಕಿಂಗ್ ಸಾಫ್ಟ್  ವೇರ್ ಬಳಸುತ್ತಿದ್ದಾರೆ ಎಂದು ಬ್ಯುಸಿನೆಸ್ ಟುಡೆ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com