
ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇರುವಿಕೆ ಬಗ್ಗೆ ಭಾರತ ಸಾಕ್ಷಿ ನೀಡಲು ಸಿದ್ಧತೆ ನಡೆಸಿದೆ. ಈ ಸಾಕ್ಷಿಗಳನ್ನು ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ನೀಡಲಿದೆ.
ಪಾಕಿಸ್ತಾನದಲ್ಲಿ ದಾವೂದ್ ಇರುವಿಕೆ ಕುರಿತಾದ ಸಾಕ್ಷಿಗಳನ್ನು ಹೊಂದಿರುವ ಈ ಕಡತದಲ್ಲಿ ಆತನ ವಿಳಾಸ ಹಾಗೂ ಆತ ಮಾಡಿರುವ ಕರೆಗಳ ಬಗ್ಗೆ ಮಾಹಿತಿ ಇದೆ. 1993 ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವುದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಭಾರತ ಸರ್ಕಾರ ಹೇಳುತ್ತಿದ್ದರು ಪಾಕಿಸ್ತಾನ ಅದನ್ನು ನಿರಾಕರಿಸುತ್ತಿತ್ತು.
ಇತ್ತ ಭಾರತದಲ್ಲೂ ವಿರೋಧ ಪಕ್ಷಳು ಎನ್.ಡಿ.ಎ ಸರ್ಕಾರಕ್ಕೆ ದಾವೂದ್ ಇಬ್ರಾಹಿಂ ನನ್ನು ಬಂಧಿಸಿ ಎಂದು ಸವಾಲು ಹಾಕಿದ್ದವು. ಇತ್ತೀಚೆಗಷ್ಟೆ ಎನ್.ಡಿ.ಎ ಮೈತ್ರಿ ಪಕ್ಷ ಶಿವಸೇನೆ ಸಹ ಬಿಜೆಪಿ ಗೆ ಧೈರ್ಯವಿದ್ದರೆ ದಾವೂದ್ ನನ್ನು ಬಂಧಿಸಲಿ ಎಂದು ನರೇಂದ್ರ ಮೋದಿ ಸರ್ಕಾರಕ್ಕೆ ಸವಾಲು ಹಾಕಿತ್ತು. 1993 ರಲ್ಲಿ ನಡೆದಿದ್ದ ಮುಂಬೈ ಸ್ಫೋಟ ಪ್ರಕರಣದಲ್ಲಿ 350 ಕ್ಕೂ ಹೆಚ್ಚು ಜನ ಸಾವನ್ನಪಪಿದ್ದರೆ 1200 ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದರು.
Advertisement