ಗುಜರಾತ್ ಪ್ರವಾಹ 10 ಸಿಂಹಗಳು, 90 ಚುಕ್ಕಿ ಜಿಂಕೆ ಸಾವು

ಗುಜರಾತ್‍ನಲ್ಲಿ ಉಂಟಾಗಿದ್ದ ಹಠಾತ್ ಪ್ರವಾಹಕ್ಕೆ 10 ಸಿಂಹ, 90 ಚುಕ್ಕಿ ಜಿಂಕೆ, 1,600 ಬ್ಲೂ ಬುಲ್ಸ್ ಸೇರಿ ಹಲವು ಪ್ರಾಣಿಗಳು ಅಸುನೀಗಿವೆ ಎಂದು ಗುಜರಾತ್ ಪ್ರಧಾನ...
ಪ್ರವಾಹಕ್ಕೆ ಬಲಿಯಾದ ಸಿಂಹದ ಕಳೆಬರಹ
ಪ್ರವಾಹಕ್ಕೆ ಬಲಿಯಾದ ಸಿಂಹದ ಕಳೆಬರಹ

ನವದೆಹಲಿ: ಗುಜರಾತ್‍ನಲ್ಲಿ ಉಂಟಾಗಿದ್ದ ಹಠಾತ್ ಪ್ರವಾಹಕ್ಕೆ 10 ಸಿಂಹ, 90 ಚುಕ್ಕಿ ಜಿಂಕೆ, 1,600 ಬ್ಲೂ ಬುಲ್ಸ್ ಸೇರಿ ಹಲವು ಪ್ರಾಣಿಗಳು ಅಸುನೀಗಿವೆ ಎಂದು ಗುಜರಾತ್ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.

ಅಮ್ರೇಲಿ, ಭಾವಾನಗರದಲ್ಲಿ ಹೆಚ್ಚಾಗಿ ವನ್ಯ ಜೀವಿಗಳು ಅಸುನೀಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಎರಡೂ ಜಿಲ್ಲಾಡಳಿತಗಳು 80 ಸಿಂಹಗಳನ್ನು ಪಾರು ಮಾಡಿವೆ. ಜತೆಗೆ ಜು.2ರವರೆಗೆ 10 ಸಿಂಹಗಳು, 1,670 ಬ್ಲೂ ಬುಲ್ಸ್, 87 ಚುಕ್ಕಿ ಜಿಂಕೆ, 9 ಕೃಷ್ಣಮೃಗ, 6 ಕಾಡುಹಂದಿಹಳ ಕಳೇಬರಗಳನ್ನು ಪತ್ತೆ ಮಾಡಲಾಗಿದೆ.

ಅಮ್ರೇಲಿ ಜಿಲ್ಲೆಯಲ್ಲಿ 4 ಮತ್ತು ಭಾವಾನಗರ ಜಿಲ್ಲೆಯಲ್ಲಿ 6 ಸಿಂಹಗಳು ಅಸುನೀಗಿವೆ. ಮರಣೋತ್ತರ ಪರೀಕ್ಷೆ ಬಳಿಕ ಸಿಂಹಗಳೂ ಸೇರಿ ಎಲ್ಲ ವನ್ಯಜೀವಿಗಳನ್ನು ಹೂಳಲಾಗಿದೆ. ಪ್ರವಾಹದ ವೇಳೆ ಅಪಾಯದಲ್ಲಿ ಸಿಕ್ಕಿ ಹಾಕಿಕೊಂಡು ರಕ್ಷಿಸಲಾಗಿದ್ದ ಪ್ರಾಣಿಗಳ ಆರೋಗ್ಯ ಕಾಪಾಡಲು ಕ್ರಮಕೈಗೊಳ್ಳಲಾಗಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com