ನೆಟ್ ಸ್ವಾತಂತ್ರ್ಯೋತ್ಸವ

ಮಹತ್ವದ ಬೆಳವಣಿಗೆಯೊಂದರಲ್ಲಿ ದೂರಸಂಪರ್ಕ ಇಲಾಖೆಯು ದೇಶದಲ್ಲಿ ಅಂತರ್ಜಾಲ ತಟಸ್ಥ ನೀತಿಯನ್ನು ಎತ್ತಿಹಿಡಿದಿದೆ. ಗುರುವಾರ ಅಂತರ್ಜಾಲ ತಟಸ್ಥ ...
ನೆಟ್ ನ್ಯೂಟ್ರಾಲಿಟಿ
ನೆಟ್ ನ್ಯೂಟ್ರಾಲಿಟಿ
Updated on: 

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ದೂರಸಂಪರ್ಕ ಇಲಾಖೆಯು ದೇಶದಲ್ಲಿ ಅಂತರ್ಜಾಲ ತಟಸ್ಥ ನೀತಿಯನ್ನು ಎತ್ತಿಹಿಡಿದಿದೆ. ಗುರುವಾರ ಅಂತರ್ಜಾಲ ತಟಸ್ಥ ನೀತಿಗೆ
ಸಂಬಂಧಿಸಿ ವರದಿ ಸಲ್ಲಿಸಿದ ಇಲಾಖೆಯ ಸಮಿತಿಯು, ನೆಟ್ ನ್ಯೂಟ್ರಾಲಿಟಿಯ ಪ್ರಮುಖ ತತ್ವಗಳಿಗೆ ಎಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದೆ. ಜತೆಗೆ, ವಾಟ್ಸ್‍ಆ್ಯಪ್, ಸ್ಕೈಪ್ ಮತ್ತು ವೈಬರ್ ಮೇಲೆ ತೆರಿಗೆ ವಿಧಿಸುವಂತಹ ನಿಯಮಾವಳಿ ಜಾರಿ ಮಾಡುವಂತೆಯೂ ಶಿಫಾರಸು ಮಾಡಿದೆ. ಇದೇ ವೇಳೆ, ಮೊಬೈಲ್ ಡಾಟಾ ಶುಲ್ಕವಿಲ್ಲದೆಯೇ ಕೆಲವು ವೆಬ್‍ಸೈಟ್‍ಗಳನ್ನು ಮಾತ್ರ ನೋಡಲು ಅವಕಾಶ ಕಲ್ಪಿಸುವ ಫೇಸ್‍ಬುಕ್‍ನ ಇಂಟರ್ನೆಟ್. ಆರ್ಗ್‍ನಂತಹ ಯೋಜನೆಗಳಿಗೆ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಜತೆಗೆ, ಏರ್‍ಟೆಲ್ ಝೀರೋದಂತಹ ಯೋಜನೆಗಳನ್ನು ಜಾರಿ ಮಾಡುವ ಮುನ್ನ ಟ್ರಾಯ್ ನ ಪೂರ್ವಾನುಮತಿ ಪಡೆಯಬೇಕಾದ್ದು ಕಡ್ಡಾಯ ಎಂದು ಹೇಳಿದೆ.


ಪ್ರಮುಖ ಶಿಫಾರಸುಗಳು


  • ನೆಟ್ ನ್ಯೂಟ್ರಾಲಿಟಿ ವಿಚಾರದಲ್ಲಿ ಸರ್ಕಾರದ ನೀತಿಯ ಪ್ರಮುಖ ಗುರಿಯೇ ಅಗ್ಗದ ಬ್ರಾಡ್‍ಬ್ಯಾಂಡ್, ಗುಣಮಟ್ಟದ ಬ್ರಾಡ್‍ಬ್ಯಾಂಡ್ ಹಾಗೂ ಸಾರ್ವತ್ರಿಕ ಬ್ರಾಡ್‍ಬ್ಯಾಂಡ್ ಸೇವೆ ಒದಗಿಸುವ ಮೂಲಕ ದೇಶದ ಅಭಿವೃದ್ಧಿಯ ಗುರಿ ತಲುಪಲು ನೆರವಾಗುವುದು.
  •  ದೇಶೀಯ ವಾಯ್ಸ್  ಕಾಲಿಂಗ್‍ಗೆ ಅವಕಾಶ ಕಲ್ಪಿಸುವ ಓಟಿಟಿ ಸೇವೆಯನ್ನು ಕೂಡ ದೇಶೀಯ ಟೆಲಿಕಾಂ ಆಪರೇಟರ್ ಗಳಿಗಿರುವ ನಿಯಯಾವಳಿಗಳ ವ್ಯಾಪ್ತಿಗೆ ತರಬೇಕು. ಅಂದರೆ,
  • ವಾಟ್ಸ್ ಆ್ಯಪ್ , ವೈಬರ್‍ನಂತಹ ಆ್ಯಪ್‍ನಿಂದ ಮಾಡುವ ಕರೆಗಳನ್ನೂ ನಿಬಂಧನೆಗೊಳಪಡಿಸಬೇಕು.
  •  ಆದರೆ, ಆದಾಯ ನಷ್ಟದ ಹೆಸರಿನಲ್ಲಿ ವಾಟ್ಸ್‍ಆ್ಯಪ್,ವೈಬರ್‍ನಂತಹ ಧ್ವನಿ ಆಧಾರಿತ ಸಂದೇಶಗಳು ಅಥವಾ ಕರೆಗಳ ಸೇವೆಯನ್ನು ಸ್ಥಗಿತಗೊಳಿಸುವಂತಿಲ್ಲ
  •  ಇಂಟರ್ನೆಟ್ ಮೇಲಿನ ಬಳಕೆದಾರನ ಹಕ್ಕುಗಳನ್ನು ರಕ್ಷಿಸ ಬೇಕು. ಇಂಟರ್ನೆಟ್‍ನಲ್ಲಿ ಕಾನೂನಾತ್ಮಕ ವಿಚಾರಗಳನ್ನು ಕಳುಹಿಸುವ, ಸ್ವೀಕರಿಸುವ, ಪ್ರದರ್ಶಿಸುವ, ಬಳಸುವ ಮತ್ತು ಪೋಸ್ಟ್ ಮಾಡುವ ಗ್ರಾಹಕರ ಹಕ್ಕನ್ನು ಕಸಿದು ಕೊಳ್ಳಬಾರದು. ಕಾನೂನುಬದ್ಧವಾದ ಇಂಟರ್ನೆಟ್ ಚಟುವಟಿಕೆಗಳಿಗೆ ನಿರ್ಬಂಧ ಹೇರಬಾರದು.
  •  ಓಟಿಟಿ(ಓವರ್ ದಿ ಟಾಪ್) ಅಪ್ಲಿಕೇಷನ್ ಸೇವೆಗಳು ಗ್ರಾಹಕರ ಅಭಿವೃದ್ಧಿಗಾಗಿ ಇರುವಂಥದ್ದು ಮತ್ತು ಇದು ಉತ್ಪಾದಕತೆಯನ್ನು ಹೆಚ್ಚಿಸುತ್ತವೆ. ಹಾಗಾಗಿ ಇಂತಹ ಸೇವೆಗಳಿಗೆ ಉತ್ತೇಜನ ನೀಡಬೇಕು. ಓಟಿಟಿ ಆ್ಯಪ್ ಸೇವೆಗಳ ವಿಸ್ತರಣೆ ಮತ್ತು ಪ್ರಗತಿಯಲ್ಲಿರುವ ಅಡಚಣೆ ಗಳನ್ನು ತಕ್ಷಣವೇ ನಿರ್ಮೂಲನೆ ಮಾಡಬೇಕು
  •  ಕಂಟೆಂಟ್ ಮತ್ತು ಅಪ್ಲಿಕೇಷನ್ ಸೇವಾದಾರರು ಗೇಟ್ ಕೀಪರ್‍ನಂತೆ ಕೆಲಸ ಮಾಡಲು ಅವಕಾಶ ಕಲ್ಪಿಸಬಾರದು.
  • ರಾಷ್ಟ್ರೀಯ ಭದ್ರತೆಯು ಎಲ್ಲದಕ್ಕಿಂತಲೂ ದೊಡ್ಡದು.ಹಾಗಾಗಿ ಓಟಿಟಿ ಸೇವಾದಾರರಿಂದ ಭದ್ರತೆಗೆ ಸಂಬಂಧಿಸಿದ ಅಗತ್ಯತೆಗಳೇನಾದರೂ ಇದ್ದಲ್ಲಿ ಅಂತರ್-ಸಚಿವಾಲಯದ ಸಮಾಲೋಚನೆ ಮೂಲಕ ಪಡೆದುಕೊಳ್ಳತಕ್ಕದ್ದು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com