ಮತ್ತೆ ಹಾರಾಡಿದ ಪಾಕ್ ಧ್ವಜ

ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿ ಶುಕ್ರವಾರ ಮತ್ತೆ ಪಾಕಿಸ್ತಾನ ಧ್ವಜ ಹಾರಾಡಿದೆ...
ಜಮ್ಮು-ಕಾಶ್ಮೀರದ ನೊಹಟ್ಟಾ ಪ್ರದೇಶದಲ್ಲಿ ಪಾಕ್ ಧ್ವಜವನ್ನು ಹಾರಿಸಿ ಸಂಭ್ರಮಿಸುತ್ತಿರುವ ಮುಸುಕುಧಾರಿಗಳು
ಜಮ್ಮು-ಕಾಶ್ಮೀರದ ನೊಹಟ್ಟಾ ಪ್ರದೇಶದಲ್ಲಿ ಪಾಕ್ ಧ್ವಜವನ್ನು ಹಾರಿಸಿ ಸಂಭ್ರಮಿಸುತ್ತಿರುವ ಮುಸುಕುಧಾರಿಗಳು

ಶ್ರೀನಗರ: ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿ ಶುಕ್ರವಾರ ಮತ್ತೆ ಪಾಕಿಸ್ತಾನ ಧ್ವಜ ಹಾರಾಡಿದೆ.

ಪಾಕಿಸ್ತಾನದ ಎರಡು ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ಐಎಸ್ ಐಎಸ್ ಮತ್ತು ಲಷ್ಕರ್-ಇ-ತಯ್ಬಾದ ಕೆಲವು ಮುಸುಕುಧಾರಿ ಯುವಕರು ಇಂದು ಜಮ್ಮು-ಕಾಶ್ಮೀರದ ನೊಹಟ್ಟಾ ಪ್ರದೇಶದ ಜಮಿ ಮಸೀದಿ ಹತ್ತಿರ ಶುಕ್ರವಾರದ ಪ್ರಾರ್ಥನೆ ಮುಗಿದ ತಕ್ಷಣ ಪಾಕ್ ಧ್ವಜವನ್ನು ಹಾರಿಸಿ ಸಂಭ್ರಮಿಸಿದ್ದಾರೆ.

ಇದಕ್ಕೆ ಸ್ವಲ್ಪ ಹೊತ್ತಿಗೆ ಮುಂಚೆ ಪೊಲೀಸರು ಮತ್ತು ಒಂದು ಗುಂಪಿನ ಜನರ ಮಧ್ಯೆ ಜಗಳ ಆರಂಭವಾಯಿತು. ಪೊಲೀಸರೆಡೆಗೆ ಜನರು ಕಲ್ಲಿನಿಂದ ಹೊಡೆಯಲು ಆರಂಭಿಸಿದರು. ಆಗ ಜನರ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ಈ ಸಂದರ್ಭದಲ್ಲಿ ಪಾಕ್ ಧ್ವಜವನ್ನು ಹಾರಿಸಿದ್ದಾರೆ.

ಈಗ ಅಲ್ಲಿ ಪರಿಸ್ಥಿತಿ ಶಾಂತವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಕಾಶ್ಮೀರಿ ಕಣಿವೆಯಲ್ಲಿ ಐಎಸ್ ಐಎಸ್ ಪದೇಪದೇ ಪಾಕ್ ಧ್ವಜವನ್ನು ಹಾರಿಸುವ ಉದ್ಧಟತನ ಹೆಚ್ಚಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com