ವಾಲ್ಮೀಕಿ ಯಾರು? ಸರ್ಕಾರ ಸ್ಪಷ್ಟಪಡಿಸಲಿ: ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ

ಡಾ. ನಾರಾಯಣಾಚಾರ್ಯ ಅವರು ಬರೆದಿರುವ `ವಾಲ್ಮೀಕಿ ಯಾರು?' ವಿವಾದಿತ ಕೃತಿಯನ್ನು ಕಾನೂನಾತ್ಮಕವಾಗಿ ಮುಟ್ಟು-ಗೋಲು...
ವಾಲ್ಮೀಕಿ
ವಾಲ್ಮೀಕಿ

ಬೆಂಗಳೂರು: ಡಾ. ನಾರಾಯಣಾಚಾರ್ಯ ಅವರು ಬರೆದಿರುವ `ವಾಲ್ಮೀಕಿ ಯಾರು?' ವಿವಾದಿತ ಕೃತಿಯನ್ನು ಕಾನೂನಾತ್ಮಕವಾಗಿ ಮುಟ್ಟು-ಗೋಲು ಹಾಕಿಕೊಳ್ಳಬೇಕು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸರ್ಕಾರವನ್ನು ಒತ್ತಾಯಿಸಿದೆ.

ಸರ್ಕಾರ ಕಾನೂನು ರೀತಿಯಲ್ಲೇ `ವಾಲ್ಮೀಕಿ ಯಾರು' ಎಂಬ ಕೃತಿ-ಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸರ್ಕಾರ ಕೃತಿಯ ಮುಟ್ಟಿಗೋಲಿಗೆ ಮುಂದಾಗದಿದ್ದರೆ ಸಮಾಜದ ಜನರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮಹಾಸಭಾದ ರಾಜ್ಯಾಧ್ಯಕ್ಷ ಎಂ. ನರಸಿಂಹಯ್ಯ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಲೇಖಕ ಡಾ. ನಾರಾಯಣಾ-ಚಾರ್ಯರಷ್ಟೇ ಅಲ್ಲ, ಅಂತಹ ಸಾವಿರಾರು ಜನರು ಏನೇ ಹೇಳಿದರೂ ವಾಲ್ಮೀಕಿ ಬ್ರಾಹ್ಮಣನಾಗಲು ಸಾಧ್ಯವಿಲ್ಲ. ವಾಲ್ಮೀಕಿ `ಬೇಡ' ಜಾತಿಗೆ ಸೇರಿದವನೆಂಬುದು ಸೂರ್ಯಚಂದ್ರರಷ್ಟೇ ಸತ್ಯ. ಹಾಗಾಗಿ ಇನ್ನು ಮುಂದಾದರೂ ವಾಲ್ಮೀಕಿ ಸಮಾಜದ ಜನರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನವನ್ನು ಸಮಾಜದಲ್ಲಿ ಯಾರೂ ಮಾಡಬಾರದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com