ಕ್ಷೇತ್ರ ಮರೆತ ಶಾಸಕನನ್ನು ಹಗ್ಗ ಹಾಕಿ ಬಂಧಿಸಿದರು!

ಹಲವು ಆಶ್ವಾಸನೆ ನೀಡಿ ಆರಿಸಿ ಹೋದ ಜನಪ್ರತಿನಿಧಿಗಳು ನಂತರ ತಮ್ಮ ಕ್ಷೇತ್ರಗಳನ್ನು ಮರೆತರೆ ಎಂಥ ಪರಿಣಾಮ...
ಶಾಸಕ ಬಬ್ಬನ್ ಸಿಂಗ್ ಚೌಹಾನ್ ಅವರನ್ನು ಗ್ರಾಮಸ್ಥರು ಕುರ್ಚಿಗೆ ಕಟ್ಟಿ ಹಾಕಿರುವುದು
ಶಾಸಕ ಬಬ್ಬನ್ ಸಿಂಗ್ ಚೌಹಾನ್ ಅವರನ್ನು ಗ್ರಾಮಸ್ಥರು ಕುರ್ಚಿಗೆ ಕಟ್ಟಿ ಹಾಕಿರುವುದು
Updated on

ವಾರಾಣಸಿ: ಹಲವು ಆಶ್ವಾಸನೆ ನೀಡಿ ಆರಿಸಿ ಹೋದ ಜನಪ್ರತಿನಿಧಿಗಳು ನಂತರ ತಮ್ಮ ಕ್ಷೇತ್ರಗಳನ್ನು ಮರೆತರೆ ಎಂಥ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಉತ್ತರ ಪ್ರದೇಶದ ಮುಗಲ್‍ಸರೈ ಸಾಕ್ಷಿಯಾಗಿದೆ.
ವಿದ್ಯುತ್, ನೀರಿನ ಸಮಸ್ಯೆಗೆ ಸ್ಪಂದಿಸಲಿಲ್ಲ ವೆಂಬ ಆಕ್ರೋಶದಿಂದ ಮುಗಲ್‍ಸರೈನ ಬಿಎಸ್‍ಪಿ ಶಾಸಕ ಬಬ್ಬನ್ ಸಿಂಗ್ ಚೌಹಾನ್ ಮತ್ತು ನಗರಸಭೆ ಪ್ರತಿನಿಧಿಯನ್ನು ಹಗ್ಗದಿಂದ ಕಟ್ಟಿಹಾಕಿ 2 ಗಂಟೆ ಬಂಧಿಸಿಟ್ಟ ಅಪರೂಪದ ಘಟನೆ ವರದಿಯಾಗಿದೆ.
ಅಲ್ಲಿನ 3ನೇ ವಾರ್ಡ್‍ನಲ್ಲಿ ಮೂಲ ಸೌಕರ್ಯಗಳಿಗೆ ವಿಪರೀತ ಸಮಸ್ಯೆ ಇರುವ ಬಗ್ಗೆ ಸ್ಥಳೀಯ ಸಂಸ್ಥೆಗಳಿಗೆ, ಶಾಸಕರ ಕಚೇರಿಗೆ ಎಷ್ಟು ಬಾರಿ ದೂರು ಸಲ್ಲಿಸಿದರೂ ಪ್ರಯೋಜನ ಆಗದೇ ಹೋದಾಗ ಅನ್ಯ ಮಾರ್ಗ ಕಾಣದ ಸ್ಥಳೀಯರು ಈ ಕ್ರಮಕ್ಕೆ ಮುಂದಾದರು.
ಸಮಸ್ಯೆಯ ಪರಿಹಾರಕ್ಕೆ ರು.80 ಲಕ್ಷದ ಟೆಂಡರ್ ಜಾರಿಯಾಗಿದ್ದರೂ ಕೂಡ ಯಾವ ಸುಧಾರಣೆಗಳೂ ಆಗಿಲ್ಲ ವೆಂಬುದು ಅಲ್ಲಿನ ಜನತೆಯ ಅಸಮಾಧಾನಕ್ಕೆ ಕಾರಣ. ಸ್ಥಳಕ್ಕೆ ಧಾವಿಸಿದ ಪೊಲೀಸರು ಶಾಸಕ ಬಬ್ಬನ್ ಸಿಂಗ್ ರನ್ನು ಮತ್ತು ನಗರಸಭೆ ಸದಸ್ಯನನ್ನು ಬಂಧಮುಕ್ತಗೊಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com