
ಪಣಜಿ: ಗೋವಾಕ್ಕೆ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಸರ್ಕಾರದ ಯೋಜನೆ ಯನ್ನು ತನ್ನದಾಗಿಸಿಕೊಳ್ಳಲು ಅಮೆರಿಕದ ಸಂಸ್ಥೆ 2009ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಸಚಿವರಿಗೆ ಲಂಚ ನೀಡಿತ್ತು ಎಂಬ ಆರೋಪವನ್ನು ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಅಲ್ಲಗಳೆದಿದ್ದು, ತಮ್ಮ ಅವಧಿಯ ಎಲ್ಲ ಟೆಂಡರ್‍ಗಳು ನಿಯಮದಂತೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯೋಜನೆಯ ಸಂಬಂಧ ಕೇಂದ್ರದ ಅಂದಾಜು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅದರಲ್ಲಿ ರಾಜ್ಯದ ಪಾತ್ರವೇನೂ ಇರಲಾರದು. ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಯಾವುದೇ ಸಚಿವರ ಹಸ್ತಕ್ಷೇಪ ಅಸಾಧ್ಯ. ಅಲ್ಲದೆ, ಯೋಜನೆ ಕೈಗೆತ್ತಿಕೊಳ್ಳಲು ಜಪಾನ್ ಸಂಸ್ಥೆ ಮಾತ್ರ ಕಡಿಮೆ ಬಿಡ್ ಕರೆದಿತ್ತು ಎಂದು ಹೇಳಿರುವ ಅಂದಿನ ಸಿಎಂ ದಿಗಂಬರ್ ಕಾಮತ್, `ಲಂಚದ ಆರೋಪವನ್ನು ಯಾರು ಬೇಕಾದರೂ ಮಾಡುತ್ತಾರೆ. ಆದರೆ, ಅದಕ್ಕೆ ಪುಷ್ಠಿ ನೀಡುವ ದಾಖಲೆಗಳನ್ನೂ ಒದಗಿಸ ಬೇಕಲ್ಲವೇ,' ಎಂದೂ ಅಭಿಪ್ರಾಯ ಪಟ್ಟಿದ್ದಾರೆ.
Advertisement