
ಚೆನ್ನೈ: ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಚೆನ್ನೈನ ಐಪಿಎಸ್ ಅಧಿಕಾರಿ ಸಂತೋಷ್ ಕುಮಾರ್ ವಿರುದ್ಧ ಅವರ ಪತ್ನಿ ವರದಕ್ಷಿಣ ಕಿರುಕುಳ ಪ್ರಕರಣ ದಾಖಲಿಸಿರುವುದಾಗಿ ಮಂಗಳವಾರ ತಿಳಿದುಬಂದಿದೆ.
ಈ ಕುರಿತಂತೆ ಮಾತನಾಡಿರುವ ಐಪಿಎಸ್ ಅಧಿಕಾರಿ ಪತ್ನಿ ಮೇಘನಾ, ನನ್ನ ಪತಿ ಸಂತೋಷ್ ಕುಮಾರ್ ರೊಂದಿಗೆ 2014 ರಲ್ಲಿ ವಿವಾಹವಾಗಿದ್ದೆ. ವಿವಾಹವಾಗಿದ್ದಾಗಿನಿಂದಲೂ ಸಂತೋಷ್ ಕುಮಾರ್ ಹಾಗೂ ಅವರ ಅಪ್ಪ, ಅಮ್ಮ ಮೂವರೂ ಸೇರಿ ಕಿರುಕುಳ ನೀಡುತ್ತಿದ್ದರು. ದಿನಕ್ಕೆ ಎರಡು ಬಾರಿ ಊಟ ನೀಡುತ್ತಿದ್ದರಲ್ಲದೇ, ದೈಹಿಕ ಹಾಗೂ ಮಾನಸಿಕವಾಗಿ ನೋವುಂಟು ಮಾಡುತ್ತಿದ್ದರು. ನನಗೀಗ 9 ವರ್ಷದ ಮಗನಿದ್ದು, ಮಗನನ್ನು ಸಾಕುವ ಸಲುವಾಗಿ ಕಾಲೇಜುಗಳಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದೇನೆ.
ಪತಿ ಹಾಗೂ ಮನೆಯ ಕಿರುಕುಳ ತಾಳಲಾರದೇ ಈಗಾಗಲೇ ಎರಡು ಬಾರಿ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆ. ಈ ಬಗ್ಗೆ ಉಪ ಆಯುಕ್ತರ ಬಳಿಯೂ ಮಾತನಾಡಿ ಪ್ರತಿಯೊಂದು ವಿಷಯವನ್ನು ಪತ್ರದಲ್ಲಿ ಬರೆದು ದೂರು ನೀಡಿದ್ದೆ. ಈ ಬಗ್ಗೆ ಅಧಿಕಾರಿಗಳು ಸಂತೋಷ ಕುಮಾರ್ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತಾರೆಂದುಕೊಂಡಿದ್ದೆ. ಆದರೆ, ಅಧಿಕಾರಿಗಳು ಪ್ರಕರಣ ಕುರಿತಂತೆ ನಡೆದುಕೊಂಡ ರೀತಿ ಸಾಕಷ್ಟು ನೋವು ಮಾಡಿದೆ. ಐಪಿಎಸ್ ಅಧಿಕಾರಿಯಾಗಿ ಕುರ್ಚಿಯಲ್ಲಿ ಕುಳಿತುಕೊಳ್ಳುವ ಅರ್ಹತೆ ಸಂತೋಷ್ ಕುಮಾರ್ ಗೆ ಇಲ್ಲ. ಇದೀಗ ಸಂತೋಷ್ ಕುಮರ್ ಮರು ವಿವಾಹವಾಗುತ್ತಿದ್ದು, ಪ್ರಕರಣವನ್ನು ಸಿಬಿ ಸಿಐಡಿ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
Advertisement