ಹಿಂದೂ ವಿದ್ಯಾರ್ಥಿಗಳಿಗೆ ಮುಸ್ಲಿಂ ಎನ್‌ಜಿಓದಿಂದ ವಿದ್ಯಾರ್ಥಿವೇತನ

ಮಹಾರಾಷ್ಟ್ರದಲ್ಲಿ ಮುಸ್ಲಿಂ ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ಸರ್ಕಾರೇತರ ಸೇವಾ ಸಂಘಟನೆ(ಎನ್‌ಜಿಓ)ಯೊಂದು ಹಿಂದು...
ಎನ್‌ಜಿಓ
ಎನ್‌ಜಿಓ

ಮುಂಬೈ: ಮಹಾರಾಷ್ಟ್ರದಲ್ಲಿ ಮುಸ್ಲಿಂ ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ಸರ್ಕಾರೇತರ ಸೇವಾ ಸಂಘಟನೆ(ಎನ್‌ಜಿಓ)ಯೊಂದು ಹಿಂದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಿದೆ.

ರಾಜ್ಯದ ವಿವಿಧ ಶಾಲೆಗಳು ಹಾಗೂ ಕಾಲೇಜುಗಳ ವಿದ್ಯಾರ್ಥಿಗಳಿಗೆ 50 ಲಕ್ಷ ರು.ಗಳಿಗೂ ಅಧಿಕ ಮೊತ್ತದ ಸ್ಕಾಲ'ರ್‌ಶಿಪ್‌ನ್ನು ಜಮೀಯತ್‌ ಉಲಮಾ ಎ ಮಹಾರಾಷ್ಟ್ರ ಸಂಘಟನೆಯು ನೀಡಿದೆ. ಆರನೇ ತರಗತಿಯಂದ ಪದವಿ ಮಟ್ಟದ ವರೆಗಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇಂಜಿನಿಯರಿಂಗ್‌ ಮತ್ತು ಮೆಡಿಕಲ್‌ ವಿದ್ಯಾರ್ಥಿಗಳಿಗೂ ಈ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ.

ಜಮೀಯತ್‌ ಉಲಮಾ ಎ ಮಹಾರಾಷ್ಟ್ರ ಇದರ ರಾಜ್ಯಾಧ್ಯಕ್ಷ ಮೌಲಾನಾ ಮುಸ್ತಕೀಮ್‌ ಆಜ್ಮಿ ಅವರ ಉಪಸ್ಥಿತಿಯಲ್ಲಿ ಒಟ್ಟಾರೆ 400 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡಲಾಗಿದ್ದು, ಇವರಲ್ಲಿ 50 ಮಂದಿ ಹಿಂದೂ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com