
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ನಿಲುವಳಿ ಸೂಚನೆಗೆ ಸಂಸತ್ ಸಮ್ಮತಿಸಿದೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ರಾಬರ್ಟ್ ವಾದ್ರಾ ಸಂಸದರ ವಿರುದ್ಧ ಕಾಮೆಂಟ್ಸ್ ಹಾಕಿದ್ದರ ಹಿನ್ನೆಲೆಯಲ್ಲಿ ನಿಲುವಳಿ ಸೂಚನೆಗೆ ಪಾರ್ಲಿಮೆಂಟ್ ಒಪ್ಪಿದೆ. ಸಂಸತ್ ಕಲಾಪ ಆರಂಭವಾಗುತ್ತಿದ್ದಂತೆ ಸಂಸದರು ತಮ್ಮ ರಾಜಕೀಯ ತಂತ್ರಗಾರಿಕೆ ಮೂಲಕ ಸದನದ ಗಮನವನ್ನು ಬೇರೆಡೆ ಸೆಳೆಯಲು ಸಣ್ಣಸಣ್ಣ ತಂತ್ರಗಳನ್ನು ಅನುಸರಿಸುತ್ತಾರೆ. ಭಾರತದ ನಾಗರಿಕರು ಮೂರ್ಖರಲ್ಲ. ಇಂಥ ನಾಯಕರು ದೇಶವನ್ನಾಳುತ್ತಿರುವುದು ವಿಷಾಧನೀಯ ಎಂದು ತಮ್ಮ ಪೇಸ್ ಬುಕ್ ನಲ್ಲಿ ಕಾಮೆಂಟ್ ಹಾಕಿದ್ದಾರೆ.
ಪ್ರಜಾಪ್ರಭುತ್ವ ಆಡಳಿತವಿರುವ ಭಾರತದಲ್ಲಿ ನಾಯಕರು ನಡೆಸುತ್ತಿರುವ ಸರ್ವಾಧಿಕಾರಿ ಧೋರಣೆ ವಿರುದ್ಧ ಹೋರಾಟ ನಡೆಸಬೇಕು ಎಂದಿದ್ದಾರೆ.
ಕಳೆದ ಮೂರು ದಿನಗಳಿಂದ ಲಲಿತ್ ಮೋದಿ ಪ್ರಕರಣ ಸಂಬಂಧ ಸಂಸತ್ ಮುಂಗಾರು ಅಧಿವೇಶನದ ಕಲಾಪವನ್ನು ಮುಂದೂಡುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಕಾಮೆಂಟ್ ಹಾಕಿಕೊಂಡಿದ್ದಾರೆ.
Advertisement