ವಸಾಹತುಶಾಹಿ ಸಮರ್ಥಕರ ವಿರುದ್ಧ ಶಶಿ ತರೂರ್ ವಾಗ್ಯುದ್ಧ; ವೈರಲ್ ಆದ ವಿಡಿಯೋ

ಬ್ರಿಟಿಶ್ ವಸಾಹತುಶಾಹಿಯಿಂದ, ವಸಾಹತು ದೇಶಗಳಿಗೆ ಆಗಿರುವ ಅನ್ಯಾಯ ಅಥವಾ ಉಪಯೋಗಗಳ ಬಗ್ಗೆ ಆಕ್ಸ್ಫರ್ಡ್ ಯೂನಿಯನ್ ನಡೆಸಿದ್ದ ಚರ್ಚೆಯಲ್ಲಿ ಭಾಗವಹಿಸಿದ್ದ
ಲೋಕಸಭಾ ಸದಸ್ಯ ಶಶಿ ತರೂರ್
ಲೋಕಸಭಾ ಸದಸ್ಯ ಶಶಿ ತರೂರ್

ಬ್ರಿಟಿಶ್ ವಸಾಹತುಶಾಹಿಯಿಂದ, ವಸಾಹತು ದೇಶಗಳಿಗೆ ಆಗಿರುವ ಅನ್ಯಾಯ ಅಥವಾ ಉಪಯೋಗಗಳ ಬಗ್ಗೆ ಆಕ್ಸ್ಫರ್ಡ್ ಯೂನಿಯನ್ ನಡೆಸಿದ್ದ ಚರ್ಚೆಯಲ್ಲಿ ಭಾಗವಹಿಸಿದ್ದ ಲೋಕಸಭಾ ಸದಸ್ಯ ಶಶಿ ತರೂರ್ ಅವರು ಭಾರತದಲ್ಲಿ ಬ್ರಿಟಿಷರು ನಡೆಸಿದ ೨೦೦ ವರ್ಷಗಳ ದುರಾಕ್ರಮಣ ಆಡಳಿತವನ್ನು ತಮ್ಮ ಅದ್ಭುತ ಮಾತು ಕಲಾಗಾರಿಕೆಯೊಂದಿಗೆ ಟೀಕಿಸಿ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ವೀಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

ಬ್ರಿಟಿಶ್ ಆಳ್ವಿಕೆಯ ಸಮಯದಲ್ಲಿ ಕೋಲ್ಕತ್ತಾದಲ್ಲಿ ನಡೆದ ದೈತ್ಯ ಪ್ರವಾಹದಿಂದ ಲಕ್ಷಾಂತರ ಜನ ಸಾಯುವಾಗ ಅದರ ಬಗ್ಗೆ ತಲೆಕೆಡಸಿಕೊಳ್ಳದ ಆಡಳಿತ, ಭಾರತೀಯ ನೇಯ್ಗೆಯವರನ್ನು ಬ್ರಿಟಿಶ್ ಆಡಳಿತ ಸುಲಿಗೆ ಮಾಡಿದ ರೀತಿ, ಜನಾಂಗೀಯ ನಿಂದನೆಗಳು, ಭಾರತೀಯ ಜನರನ್ನು ಲೆಕ್ಕಿಸದೆ ಅವರನ್ನು ಪ್ರಥಮ ವಿಶ್ವ ಯುದ್ಧದಲ್ಲಿ ದುಡಿಸಿಕೊಂಡ ಬಗೆ ಹೀಗೆ ಹತ್ತು ಹಲವು ವಿಷಯಗಳನ್ನು ಚರ್ಚೆಗೆ ಎತ್ತುಕೊಂಡು ಬ್ರಿಟಿಶ್ ಆಡಳಿತ ಭಾರತವನ್ನು ಹೇಗೆ ಲೂಟಿ ಮಾಡಿತು ಹಾಗೆಯೇ ಹಿಂದಿ ಪದ 'ಲೂಟಿ' ಯನ್ನು ತನ್ನ ನಿಘಂಟಿನಲ್ಲಿ ಅಳವಡಿಸಿಕೊಂಡಿತು ಎಂದು ವ್ಯಂಗ್ಯವಾಡಿದ್ದಾರೆ.

೧೯ ನೆ ಶತಮಾನದಲ್ಲಿ ಬ್ರಿಟನ್ ಗೆ ಭಾರತ ನಗದು ಹಣವನ್ನು ಒದಗಿಸುತ್ತಿದ್ದ ಹಸುವಂತಿತ್ತು. ತುಳಿತಕ್ಕೊಳಗಾಗಿದ್ದಕ್ಕೆ ನಾವು ನಮ್ಮ ಸಂಪನ್ಮೂಲಗಳನ್ನು ಅವರಿಗೆ ಒದಗಿಸಿಕೊಟ್ಟಿದೇವೆ ಎಂದು ವಸಾಹತುಶಾಹಿ ಸಮರ್ಥಕರ ವಿರುದ್ಧ ವಾಗ್ಯುದ್ಧ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com