ಮೋದಿ ಬಿಹಾರ ಪ್ರವಾಸಕ್ಕೂ ಮುಂಚೆ ಬಿಹಾರದಲ್ಲಿ ನಾಲ್ವರ ಬಂಧನ

ಮೂವರು ಶಂಕಿತ ಮಾವೋವಾದಿಗಳು ಸೇರಿದಂತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಿಹಾರ ಪ್ರವಾಸಕ್ಕೂ ಮುಂಚಿತವಾಗಿ ಅನುಮಾಸ್ಪಾದಕ ಚಟುವಟಿಕೆಗಳ
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ಪಾಟ್ನಾ: ಮೂವರು ಶಂಕಿತ ಮಾವೋವಾದಿಗಳು ಸೇರಿದಂತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಿಹಾರ ಪ್ರವಾಸಕ್ಕೂ ಮುಂಚಿತವಾಗಿ ಅನುಮಾಸ್ಪಾದಕ ಚಟುವಟಿಕೆಗಳ ಆರೋಪದ ಮೇಲೆ ಶನಿವಾರ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ ರೀತಿಯಲ್ಲೇ 'ಮಾನವ ಬಾಂಬ್' ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಬೇಹುಗಾರಿಕಾ ಸಂಸ್ಥೆ ಎಚ್ಚರಿಕೆ ನೀಡಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಒಬ್ಬ ಶಂಕಿತ ಜಮ್ಮು ಕಾಶ್ಮೀರದವನು. ಅವನನ್ನು ಪಾಟ್ನಾದ ಎಸ್ ಕೆ ಪೂರಿ ಪ್ರದೇಶದಿಂದ ಶನಿವಾರ ಬೆಳಗ್ಗೆ ವಶಕ್ಕೆ ಪಡೆಯಲಾಗಿದೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮೋದಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿರುವ ಮುಜಪ್ಫರಪುರದಿಂದ ಮೂವರು ಶಂಕಿತ ಮಾವೋವಾದಿಗಳನ್ನು ಬಂಧಿಸಲಾಗಿದೆ. ಬಿಗಿ ಬಧ್ರತೆಯನ್ನು ಒದಗಿಸಲಾಗಿದ್ದು ಆ ಪ್ರದೇಶವನ್ನು ಕೋಟೆಯನ್ನಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನರೇಂದ್ರ ಮೋದಿಯವರನ್ನು ಪಾಟ್ನಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಿದ್ದಾರೆ.

ಈ ಹಿಂದೆ ಅಕ್ಟೋಬರ್ ೨೭ ೨೦೧೩ರಲ್ಲಿ ಗಾಂಧಿ ಮೈದಾನದಲ್ಲಿ ಮೋದಿ ನಡೆಸಿದ್ದ ರ್ಯಾಲಿಯ ವೇಳೆಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಿಂದ ಐವರು ಮೃತಪಟ್ಟು ೧೦೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com