

ಕೊಚ್ಚಿ: ಕೊಚ್ಚಿಯ ಸಬ್ ವೇ ರೆಸ್ಟೋರೆಂಟ್ ನಲ್ಲಿ ಚಿಕನ್ ರೋಸ್ಟ್ ಸಲಾಡ್ ನಲ್ಲಿ ಜೀವಂತ ಹುಳು ಸಿಕ್ಕಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಳೆದ ರಾತ್ರಿ ದೆಹಲಿ ಮೂಲದ ಪತ್ರಕರ್ತೆ ಐಶ್ವರ್ಯಾ ಸಾತಿ ಎಂಬುವರು ತಮ್ಮ ಸ್ನೇಹಿತರೊಂದಿಗೆ ಡಿನ್ನರ್ ಗಾಗಿ ಕೊಚ್ಚಿಯ ಸಬ್‍ವೇ ರೆಸ್ಟೋರೆಂಟ್‌ಗೆ ಹೋಗಿದ್ದಾರೆ. ಈ ವೇಳೆ ಐಶ್ವರ್ಯಾ ಚಿಕನ್ ರೋಸ್ಟ್ ಸಲಾಡ್ ನ್ನು ಆರ್ಡರ್ ಮಾಡಿದ್ದು, ಹೊಟೇಲ್ ಸಿಬ್ಬಂದಿ ತಂದುಕೊಟ್ಟ ಸಲಾಡ್ ನಲ್ಲಿ ಜೀವಂತ ಹುಳು ಕಂಡು ಬಂದಿದೆ. ಇದರಿಂದ ಅಸಹ್ಯಗೊಂಡ ಪತ್ರಕರ್ತೆ ಕೂಡಲೆ ತಮ್ಮ ಮೊಬೈಲ್ ನಲ್ಲಿ ಫೋಟೋ ಹಾಗೂ ವಿಡಿಯೋವನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ.
ಚಿಕನ್ ರೋಸ್ಟ್ ಸಲಾಡ್ ನಲ್ಲಿ ಜೀವಂತ ಹುಳುವನ್ನು ಕಂಡ ಪತ್ರಕರ್ತೆ ಈ ಬಗ್ಗೆ ಹೊಟೇಲ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ನಮ್ಮಿಂದ ತಪ್ಪಾಗಿದೆ ಎಂದು ಕ್ಷಮೆಯಾಚಿಸಿರುವುದಾಗಿ ಐಶ್ವರ್ಯಾ ಹೇಳಿದ್ದಾರೆ.