ಭಾರತದಲ್ಲಿ ಶೇ.30 ರಷ್ಟು ನಕಲಿ ವಕೀಲರು!

ಭಾರತದಲ್ಲಿರುವ ಶೇ.30 ರಷ್ಟು ವಕೀಲರು ನಕಲಿ ಅಥವಾ ಅಭ್ಯಾಸ ಮಾಡದೇ ಪ್ರಮಾಣಪತ್ರಗಳನ್ನು ದುರುಪಯೋಗಪಡಿಸಿಕೊಳ್ಳುವವರು
ವಕೀಲರ ಸಭೆಯಲ್ಲಿ ಭಾಗವಹಿಸಿರುವ ಮಿಶ್ರಾ, ಸದಾನಂದ ಗೌಡ
ವಕೀಲರ ಸಭೆಯಲ್ಲಿ ಭಾಗವಹಿಸಿರುವ ಮಿಶ್ರಾ, ಸದಾನಂದ ಗೌಡ

ಚೆನ್ನೈ: ಭಾರತದಲ್ಲಿರುವ ಶೇ.30 ರಷ್ಟು ವಕೀಲರು ನಕಲಿ ಅಥವಾ ಅಭ್ಯಾಸ ಮಾಡದೇ ಪ್ರಮಾಣಪತ್ರಗಳನ್ನು ದುರುಪಯೋಗಪಡಿಸಿಕೊಳ್ಳುವವರು ಎಂದು ಅಖಿಲ ಭಾರತ ವಕೀಲರ ಮಂಡಳಿಯ ಅಧ್ಯಕ್ಷ  ಮನನ್ ಕುಮಾರ್ ಮಿಶ್ರಾ ಹೇಳಿದ್ದಾರೆ.

ಚೆನ್ನೈ ನ ವಕೀಲರ ಮಂಡಳಿ ಕಳೆದ ಮೂರು ತಿಂಗಳ ಹಿಂದೆ ನಕಲಿ ಕಾನೂನು ಪದವಿ ನೀಡುವ ಜಾಲವನ್ನು ಪತ್ತೆಹಚ್ಚಿದ ಬೆನ್ನಲ್ಲೇ ವಕೀಲರ ಮಂಡಳಿ ಅಧ್ಯಕ್ಷರು ದೇಶದಲ್ಲಿರುವ ಶೇ.30 ರಷ್ಟು ವಕೀಲರು ನಕಲಿಯಾಗಿದ್ದು ಅಭ್ಯಾಸ ಪ್ರಮಾಣಪತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ನಕಲಿ ವಕೀಲರು ದೇಶಕ್ಕೇ ಮಾರಕ ಎಂದು ಅಭಿಪ್ರಾಯಪಟ್ಟಿರುವ ಮನನ್ ಕುಮಾರ್ ಮಿಶ್ರಾ, ನಕಲಿ ವಕೀಲರಲ್ಲಿ ಕಂಡುಬರುವ ಅತಿರೇಕದ ನ್ಯಾಯಾಲಯದ ಬಹಿಷ್ಕಾರಗಳ ತಪಾಸಣೆ ನಡೆಸುವ ಸಂಬಂಧ ರಚನಾತ್ಮಕ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಚೆನ್ನೈ ನಲ್ಲಿ ಕಳೆದ ಮೂರು ತಿಂಗಳ ಹಿಂದೆ ಪಿ. ಎಂ.ಕೆ ಪಕ್ಷದ ಮಹಿಳಾ ಘಟಕದ ಕಾರ್ಯಕರ್ತೆಯೊಬ್ಬರು ಸ್ವತಃ ತಾನು ನಕಲಿ ವಕೀಲ ಪದವಿ ಪ್ರಮಾಣ ಪತ್ರ ಹೊಂಡಿರುವುದಲ್ಲದೆ, ನಕಲಿ ಕಾನೂನು ಪದವಿ ನೀಡುವ ಜಾಲದಲ್ಲಿ ತೊಡಗಿಸಿಕೊಂಡಿದ್ದರು. ಇದಲ್ಲದೇ ಹೈಕೋರ್ಟ್ ನಲ್ಲಿ ವಕೀಲಿಕೆ ಅಭ್ಯಾಸ ಮಾಡುತ್ತಿದ್ದ ಮಹಿಳೆಯೊಬ್ಬರು ತನ್ನ ಪತಿ ವಕೀಲಿಕೆಯಲ್ಲಿ ನಕಲಿ ಪದವಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂಬುದು ತಿಳಿದುಬಂದೆ.  ಪರಿಸ್ಥಿತಿಯನ್ನು ಹೀಗೆ ಮುಂದುವರೆಯಲು ಬಿಡುವುದಿಲ್ಲ ಎಂದು ಮಿಶ್ರಾ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com