ಐಯುಎಂಎಲ್ ಮುಖ್ಯಸ್ಥ ಮತ್ತು ಸಂಸದ ಇಟಿ ಬಷೀರ್
ದೇಶ
ಕೋರ್ಟ್‍ಗಳು ನಂಬಿಕೆ ಬಗ್ಗೆ ಮಾತನಾಡುವುದು ಬೇಡ: ಐಯುಎಂಎಲ್
ಅಖಿಲ ಭಾರತ ವೈದ್ಯಕೀಯಪೂರ್ವ ಪರೀಕ್ಷೆಯಲ್ಲಿ ಪಾಲಿಸಲಾದ ವಸ್ತ್ರಸಂಹಿತೆಯ ಬಗೆಗಿನ ಸುಪ್ರೀಂಕೋರ್ಟ್ ನಿಲುವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಟುವಾಗಿ ವಿರೋಧಿಸಿದೆ.
ನವದೆಹಲಿ: ಅಖಿಲ ಭಾರತ ವೈದ್ಯಕೀಯಪೂರ್ವ ಪರೀಕ್ಷೆಯಲ್ಲಿ ಪಾಲಿಸಲಾದ ವಸ್ತ್ರಸಂಹಿತೆಯ ಬಗೆಗಿನ ಸುಪ್ರೀಂಕೋರ್ಟ್ ನಿಲುವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಟುವಾಗಿ ವಿರೋಧಿಸಿದೆ.
ಶುಕ್ರವಾರದಂದು ನಡೆದ ಎಐಪಿಎಂಟಿ ಮುಸ್ಲಿಂ ಅಭ್ಯರ್ಥಿಗಳಿಗೆ ಪರೀಕ್ಷೆ ಕೊಠಡಿಯೊಳಗೆ ಒಳಗೆ ತಲೆವಸ್ತ್ರ ಬಳಸಲು ಅನುಮತಿ ನೀಡದ ನಿಯಮಕ್ಕೆ ಸುಪ್ರೀಂಕೋಟ್ ಸಹಮತ ವ್ಯಕ್ತಪಡಿಸಿದ್ದಲ್ಲದೆ ಪರೀಕ್ಷಾ ಕೊಠಡಿಯೊಳಗೆ ತಲೆವಸ್ತ್ರ ಧರಿಸದಿದ್ದರೆ, ನಿಮ್ಮ ಧಾರ್ಮಿಕನಂಬಿಕೆಗಳೇನೂ ನಾಶವಾಗುವುದಿಲ್ಲ ಎಂದು ಹೇಳಿತ್ತು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೇರಳದ ಐಯುಎಂಎಲ್ ನಾಯಕ, ಸಂಸದ ಇ. ಟಿ. ಬಷೀರ್ ಸುಪ್ರೀಂ ಕೋರ್ಟ್‍ಗೆ ಮಾತ್ರವಲ್ಲ, ಯಾರಿಗೂ ಧಾರ್ಮಿಕ ನಂಬಿಕೆಗಳ ಕುರಿತು ಮಾತನಾಡುವ ಹಕ್ಕಿಲ್ಲ. ಇದು ಸಾಮಾನ್ಯ ವಿಷಯವಲ್ಲ. ಕೋರ್ಟ್ ತೀರ್ಪು ಧಾರ್ಮಿಕ ನಂಬಿಕೆಗಳ ವಿರುದ್ಧ ಬಂದಿದೆ.' ಎಂದು ಪ್ರತಿಭಟಿಸಿದ್ದಾರೆ.
ಇದೇ ವೇಳೆ ಬಷೀರ್ ಮಾತಿಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮುರಳೀಧರನ್ ಈ ದೇಶದಲ್ಲಿ ಅವರು ಇದ್ದಾರೆಂದ ಮೇಲೆ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲೇಬೇಕು. ಇಲ್ಲವಾದಲ್ಲಿ ದೇಶ ತೊರೆದು ಹೋಗಬೇಕು' ಎಂದು ತಿರುಗೇಟು ನೀಡಿದ್ದಾರೆ.ಸಂವಿಧಾನಕ್ಕೆ ಹಾಗೂ ಸುಪ್ರೀಂಕೋರ್ಟ್‍ಗೆ ಅಪಚಾರ ಎಸಗುವ ಕೆಲಸವಾಗಿದೆ ಎಂಬುದು ಅವರ ವಾದ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ