ಮೋದಿ ಕಾಳಿಂಗ ಸರ್ಪ: ಲಾಲೂ ಕಿಡಿ

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಿಹಾರ ಚುನಾವಣೆಗಾಗಿ ಹಲವು ಘೋಷಣೆಗಳನ್ನು ಮಾಡಿ ಪ್ರಚಾರ ಆರಂಭ ಮಾಡಿದ್ದಾರೆ.ಅದಕ್ಕೆ ಶನಿವಾರ ರಾಜಕೀಯ ವಲಯದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆರ್‍ಜೆಡಿ ಅಧ್ಯಕ್ಷ ಲಾಲು ಪ್ರಸಾದ್...
ಆರ್‍ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್
ಆರ್‍ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್

ಪಟನಾ/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಿಹಾರ ಚುನಾವಣೆಗಾಗಿ ಹಲವು ಘೋಷಣೆಗಳನ್ನು ಮಾಡಿ ಪ್ರಚಾರ ಆರಂಭ ಮಾಡಿದ್ದಾರೆ.ಅದಕ್ಕೆ ಶನಿವಾರ ರಾಜಕೀಯ ವಲಯದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆರ್‍ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಪ್ರಧಾನಿ ಮೋದಿಯವರನ್ನು ಕಾಳಿಂಗ ಸರ್ಪ ಎಂದು ಲೇವಡಿ ಮಾಡಿದ್ದಾರೆ. `

`ಕೃಷ್ಣ ಕಾಳಿಂಗ ರ್ಪವನ್ನು ಮರ್ದನ ಮಾಡಿದ್ದ. ಅದು ಈಗ ನರೇಂದ್ರ ಮೋದಿ ರೂಪದಲ್ಲಿ ಜನ್ಮತಾಳಿ ಬಿಹಾರವನ್ನು ಕಚ್ಚುತ್ತಿದೆ. ನಾವು (ಯದುವಂಶದವರು) ಅವರನ್ನು ಬಿಹಾರ ಚುನಾವಣೆಯಲ್ಲಿ ಹೊಸಕಿ ಹಾಕುತ್ತೇವೆ. ಮಾತ್ರವಲ್ಲದೆ ಬಿಹಾರದಿಂದ ಅವರ ಪಕ್ಷವನ್ನು ಹೊರ ಹಾಕುತ್ತೇವೆ'' ಎಂದಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ಗಣತಿಯಲ್ಲಿ ಉಲ್ಲೇಖಿತವಾದ ಜಾತಿ ಗಣತಿಯ ಮಾಹಿತಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಲಾಲು ಒತ್ತಾಯಿಸಿದ್ದಾರೆ.

ಎಸ್‍ಸಿ, ಎಸ್‍ಟಿ ಜನಾಂಗಕ್ಕೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀಡಬೇಕೆಂದೇ ಇದೆ ಎಂದು ಅವರು ವಾದಿಸಿದ್ದಾರೆ. ಬಿಜೆಪಿ ತಿರುಗೇಟು: ಕಾಳಿಂಗ ಸರ್ಪ ಎಂಬ ಲಾಲು ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಚಂದನಕ್ಕೆ ಸುತ್ತಿಕೊಂಡ ನಾಗರಹಾವು ಎಂದು ಲೇವಡಿ ಮಾಡಿದ್ದನ್ನು ಲಾಲು ಮರೆಯಬಾರದು ಎಂದು ಪಕ್ಷದ ವಕ್ತಾರ ಸಂಬಿsತ್ ಪಾತ್ರ ನೆನಪಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಲಾಲು ಯಾದವ್ ಅಂಥ ಭಾಷೆಯನ್ನೇ ಬಳಸುತ್ತಿದ್ದಾರೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com