
ಪಣಜಿ: ಅಂತಾರಾಷ್ಟ್ರೀಯ ಖ್ಯಾತಿಯ ಅಮೆರಿಕದ ನ್ಯೂಜೆರ್ಸಿ ಮೂಲದ ನಿರ್ಮಾಣ ಸಂಸ್ಥೆ 'ಲೂಯಿಸ್ ಬರ್ಗರ್' ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರಿಗೆ 1 ಕೋಟಿ ಲಂಚ ನೀಡಿದೆ ಎಂದು ಗೋವಾ ಕ್ರೈಂ ಬ್ರಾಂಚ್ ಹೇಳಿದೆ.
'ಲೂಯಿಸ್ ಬರ್ಗರ್' ಸಂಸ್ಥೆ ಗೋವಾ ಮಂತ್ರಿಗಳಿಗೆ ಲಂಚಾ ನೀಡಿರುವ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಗೋವಾ ಕ್ರೈಂ ಬ್ರಾಂಚ್ ಮಂಗಳವಾರ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದು, ಗೋವಾ ಮತ್ತು ಅಸ್ಸಾಂನ ಎರಡು ಬೃಹತ್ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಗಳ ಗುತ್ತಿಗೆ ನೀಡಲು 'ಲೂಯಿಸ್ ಬರ್ಗರ್' ಸಂಸ್ಥೆಯಿಂದ ಅಂದಿನ ಮುಖ್ಯಮಂತ್ರಿಯಾಗಿದ್ದ ದಿಗಂಬರ್ 1 ಕೋಟಿ ಲಂಚ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಈ ಲಂಚ ವ್ಯವಹಾರ 2010-2011 ನಡುವೆ ನಡೆದಿದ್ದು, ಲೂಯಿಸ್ ಬರ್ಗರ್ ಅಧಿಕಾರಿಗಳು ರು.1 ಕೋಟಿಗೂ ಹೆಚ್ಚು ಹಣವನ್ನು ನೀಡಿದ್ದಾರೆ. ಅಲ್ಲದೇ ಮಾಜಿ ಪಿಡಬ್ಲೂಡಿ ಸಚಿವ ಚರ್ಚಿಲ್ ಅಲೆಮಾವೋ ಅವರು ಕೂಡ ರು.70 ಲಕ್ಷ ಲಂಚ ಪಡೆದಿದ್ದಾರೆ ಎಂದು ತಿಳಿಸಲಾಗಿದೆ.
ಸೆಕ್ಷನ್ 164 ಸಿಆರ್ ಪಿಸಿ ಅಡಿಯಲ್ಲಿ ಲೂಯಿಸ್ ಬರ್ಗರ್ ಸಂಸ್ಥೆಯ ಇಬ್ಬರು ಮಾಜಿ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ತಮ್ಮ ಅಧಿಕೃತ ನಿವಾಸದಲ್ಲಿ ಈ ಇಬ್ಬರು ಮಂತ್ರಿಗಳಿಗೆ ಲಂಚ ನೀಡಿರುವುದಾಗಿ ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
Advertisement