ಗೋವಾ: ಮಾಜಿ ಸಿಎಂ ಕಾಮತ್‍ಗೆ ರು.6 ಕೋಟಿ ಲಂಚ?

ಬಹುಕೋಟಿಯ ಜಲಾಭಿವೃದ್ಧಿ ಯೋಜನೆ ಗುತ್ತಿಗೆ ಪಡೆಯಲು ಮಾಜಿ ಸಿಎಂ ದಿಗಂಬರ ಕಾಮತ್‍ಗೆ ಹಾಗೂ ಮಾಜಿ ಸಚಿವ ಅಲೆಮಾವೋ ಚರ್ಚಿಲ್‍ಗೆ ರು.6 ಕೋಟಿ ಲಂಚ ನೀಡಲಾಗಿದೆ.
ಗೋವಾ ಮಾಜಿ ಸಿಎಂ ದಿಗಂಬರ ಕಾಮತ್
ಗೋವಾ ಮಾಜಿ ಸಿಎಂ ದಿಗಂಬರ ಕಾಮತ್

ಪಣಜಿ: ಬಹುಕೋಟಿಯ ಜಲಾಭಿವೃದ್ಧಿ ಯೋಜನೆ ಗುತ್ತಿಗೆ ಪಡೆಯಲು ಮಾಜಿ ಸಿಎಂ ದಿಗಂಬರ ಕಾಮತ್‍ಗೆ ಹಾಗೂ ಮಾಜಿ ಸಚಿವ ಅಲೆಮಾವೋ ಚರ್ಚಿಲ್‍ಗೆ ರು.6 ಕೋಟಿ ಲಂಚ ನೀಡಲಾಗಿದೆ.

ಅಮೆರಿಕದ ನ್ಯೂಜರ್ಸಿ ಯ ಲೂಯಿಸ್ ಬರ್ಗರ್ ಕಂಪನಿಯ ಅಧಿಕಾರಿಗಳು ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಖಾಸಗಿ ವಾಹಿನಿ ವರದಿ ಮಾಡಿದೆ. ಈ ಮೂಲಕ ಹಗರಣಕ್ಕೆ ಮಹತ್ವದ ತಿರುವು ಸಿಕ್ಕಂತಾಗಿದೆ. ಜತೆಗೆ ಗೋವಾ ಪೊಲೀಸರು ಈ ಬಗ್ಗೆ ಪ್ರಬಲ ಸಾಕ್ಷಿ ಸಿಕ್ಕಿರುವುದಾಗಿ ಹೇಳಿದ್ದರಾದರೂ, ಸಿಎಂ ಮಾತ್ರ ಸದನದ ಪ್ರಶ್ನೋತ್ತರ  ಅವಧಿಯಲ್ಲಿ ಈ ಆರೋಪವನ್ನು ತಳ್ಳಿಹಾಕಿದರು. ಕಾಮತ್ ಸರ್ಕಾರದಲ್ಲಿ ಚರ್ಚಿಲ್ ಲೋಕೋಪಯೋಗಿ ಸಚಿವರಾಗಿದ್ದಾಗ ಲೂಯಿಸ್ ಬರ್ಗರ್ ಕಂಪನಿ ಈ ಜಲ ಯೋಜನೆಯ ಟೆಂಡರನ್ನು  ಪಡೆಯುವಲ್ಲಿ ಯಶಸ್ವಿಯಾಗಿತ್ತು.

ಗೋವಾದಲ್ಲಿ ಕೇಂದ್ರ ಸರ್ಕಾರ ಜಪಾನ್ ಸರ್ಕಾರದೊಂದಿಗೆ ಜಂಟಿ ಯಾಗಿ ಆರಂಭಿಸಲು ಯೋಜಿಸಿದ್ದ ನೀರು ಸರಬರಾಜು ಮತ್ತು ಒಳಚರಂಡಿ ಅಭಿವೃದ್ಧಿ ಪಂಚವಾರ್ಷಿಕ ಯೋಜನೆಗಾ ಗಿ  ಟೆಂಡರ್ ಕರೆಯಲಾಗಿತ್ತು. ಅಮೆರಿಕದ ಕಂಪನಿ ಇದನ್ನು ಪಡೆದ ನಂತರ, ಲಂಚ ನೀಡುವ ಮೂಲಕ ಗುತ್ತಿಗೆ ಪಡೆದಿದ್ದಾರೆಂಬ ಆರೋಪವನ್ನು ಕಂಪನಿ ಅಧಿಕಾರಿಗಳು ಈಗಾಗಲೇ ಒಪ್ಪಿಕೊಂಡಿದ್ದಾರೆ.

ಮಾಜಿ ಸಿಎಂ ಕಾಮತ್ ಗೆ ಸಮನ್ಸ್ ಜಾರಿ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗೋವಾ ಪೊಲೀಸರು ಮಾಜಿ ಸಿಎಂ ದಿಗಂಬರ ಕಾಮತ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಅಪರಾಧ ವಿಭಾಗದ ಪೊಲೀಸರು ಈಗಾಗಲೇ ಪ್ರಕರಣ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com