ನೂತನ ಗ್ರಾಹಕ ಹಕ್ಕು ಮಸೂದೆಗೆ ಸಂಪುಟ ಅನುಮೋದನೆ

ಚಾಲ್ತಿಯಲ್ಲಿರುವ 29 ವರ್ಷಗಳ ಹಳೆಯ ಕಾನೂನು ಬದಲಾಯಿಸುವ ನಿಟ್ಟಿನಲ್ಲಿ ನೂತನ ಗ್ರಾಹಕ ಹಕ್ಕು ರಕ್ಷಣೆ ಮಸೂದೆಗೆ ಬುಧವಾರ ಕೇಂದ್ರ ಸಂಪುಟ ಅನುಮೋದನೆ ನೀಡಿದೆ...
ಕೇಂದ್ರ ಸಂಪುಟ ಸಭೆ (ಸಂಗ್ರಹ ಚಿತ್ರ)
ಕೇಂದ್ರ ಸಂಪುಟ ಸಭೆ (ಸಂಗ್ರಹ ಚಿತ್ರ)

ನವದೆಹಲಿ: ಚಾಲ್ತಿಯಲ್ಲಿರುವ 29 ವರ್ಷಗಳ ಹಳೆಯ ಕಾನೂನು ಬದಲಾಯಿಸುವ ನಿಟ್ಟಿನಲ್ಲಿ ನೂತನ ಗ್ರಾಹಕ ಹಕ್ಕು ರಕ್ಷಣೆ ಮಸೂದೆಗೆ ಬುಧವಾರ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಅಕ್ರಮ ವಹಿವಾಟು, ವ್ಯಾಪಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರತ್ಯೇಕ ನಿಯಂತ್ರಣ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ರಚಿಸಲಾಗಿರುವ ಮಸೂದೆಯನ್ನು ಹಾಲಿ ಮುಂಗಾರು  ಅಧಿವೇಶನದಲ್ಲಿಯೇ ಮಂಡಿಸಲು ಗ್ರಾಹಕ ವ್ಯವಹಾರ ಸಚಿವಾಲಯ ನಿರ್ಧ ರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನೂತನ ಮಸೂದೆಗೆ ಅನುಮೋದನೆ  ನೀಡಲಾಯಿತು.

ನೂತನ ಮಸೂದೆಯಲ್ಲಿ, ಗ್ರಾಹಕ ದೂರುಗಳ ಶೀಘ್ರ ವಿಚಾರಣೆ ಮತ್ತು ವಿಲೇವಾರಿ ಗಾಗಿ ಅಮೆರಿಕ ಮತ್ತು ಯುರೋಪಿಯನ್ ದೇಶಗಳ ಮಾದರಿಯಲ್ಲಿ ಪ್ರತ್ಯೇಕ ಗ್ರಾಹಕ ರಕ್ಷಣೆ ಪ್ರಾಧಿಕಾರ ರಚನೆ,  ಉತ್ಪನ್ನಗಳ ಗುಣ ಮಟ್ಟ ಖಾತ್ರಿಪಡಿಸುವ ನಿಟ್ಟಿನಲ್ಲಿ ಒಬ್ಬರಿಗಿಂತ ಅಧಿಕ ಹೆಚ್ಚು ಗ್ರಾಹಕರಿಗೆ ಹಾನಿಯಾದಲ್ಲಿ ಆ ಉತ್ಪನ್ನ ಮಾರಾಟಗಾರನ ಪರವಾನಗಿ ರದ್ದು ಮಾಡುವ ಕಾನೂನು ಅವಕಾಶ  ಕಲ್ಪಿಸಲಾಗಿದೆ. ಹಾಗೆಯೇ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆಯಂ ತಹ ಕಠಿಣ ಕ್ರಮಗಳಿಗೂ ಅವಕಾಶವಿದ್ದು, ವಿಶೇಷವಾಗಿ ಆನ್‍ಲೈನ್ ಗ್ರಾಹಕರಿಗೆ ಹೆಚ್ಚಿನ ಭದ್ರತೆ ಕಲ್ಪಿಸುವ ಕಾನೂನು  ಅಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾನೂನು ತಿದ್ದುಪಡಿ: ವಿಮಾನ ಅಪಹರಣ ಕಾನೂನು ತಿದ್ದುಪಡಿಗೆ ಅನುಮೋದನೆ ನೀಡಿರುವ ಸಂಪುಟ, ಅಪಹರಣದ ವೇಳೆ ನಿಲ್ದಾಣದ ಸಿಬ್ಬಂದಿ ಜೀವ ಹಾನಿಯಾದರೂ ಅಪಹರಣಕಾರರಿಗೆ  ಮರಣದಂಡನೆ ಶಿಕ್ಷೆಗೊಳಪಡಿಸುವ ಕಾನೂನು ಅವಕಾಶ ನೀಡಿದೆ. ಹೊಸ ತಿದ್ದುಪಡಿಯಿಂದಾಗಿ ಅಪಹರಣ ಘಟನೆಯಲ್ಲಿ ಯಾವುದೇ ವ್ಯಕ್ತಿ ಸಾವನ್ನಪ್ಪಿದ್ದರೂ ಕೃತ್ಯದ ಆರೋಪಿಗಳಿಗೆ  ಮರಣದಂಡನೆ ವಿಧಿಸಬಹುದಾಗಿದೆ.

ಎನ್‍ಐಐಎಫ್ ಗೆ ಗ್ರೀನ್ ಸಿಗ್ನಲ್: ರಾಷ್ಟ್ರೀಯ ಯೋಜನೆಗಳ ಅಭಿವೃದ್ಧಿ ಮತ್ತು ಅನುಷ್ಠಾನಕ್ಕಾಗಿ 20 ಸಾವಿರ ಕೋಟಿ ರೂ.ಗಳ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ(ಎನ್ ಐಐಎಫ್)  ಸ್ಥಾಪಿಸಲು ಸಂಪುರ ಬುಧವಾರ ಗ್ರೀನ್ ಸಿಗ್ನಲ್ ನೀಡಿದೆ.

ಜಿಎಸ್‍ಟಿ- ಸಮಿತಿ ಶಿಫಾರಸು: ಸರಕು ಮಾರಾಟದ ಮೇಲೆ ವಿಧಿಸುವ ಶೇ.1ರಷ್ಟು ತೆರಿಗೆ, ಕಂಪನಿಗಳ ಆಂತರಿಕ ಸರಕು ಸಾಗಣೆಗೆ ಅನ್ವಯಿಸುವುದಿಲ್ಲ ಎಂಬ ವಿವರಣೆ ಸೇರಿಸುವಂತೆ ಜಿಎಸ್‍ಟಿ  ಕುರಿತು ರಚಿಸಲಾಗಿದ್ದ ರಾಜ್ಯಸಭಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ರಾಜ್ಯಗಳ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಜಿಎಸ್‍ಟಿ ಕಾಯ್ದೆಯಲ್ಲಿ ಬ್ಯಾಂಡ್ ದರವನ್ನು ವ್ಯಾಖ್ಯಾನಿಸಬೇಕು. ಆಗ ಬ್ಯಾಂಡ್  ವ್ಯಾಪ್ತಿಗೊಳಪಡುವ ಸರಕುಗಳ ಮೇಲೆ ಅನುಕೂಲಕರ ತೆರಿಗೆ ವಿಧಿಸುವ ಅವಕಾಶ ರಾಜ್ಯಗಳಿಗೆ ದೊರೆಯಲಿದೆ ಎಂದು ಸಮಿತಿ ಬುಧವಾರ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com