ಮಾದಕ ವ್ಯಸನದಿಂದ 2014 ರಲ್ಲಿ 3 , 600 ಜನರ ಸಾವು

ಮಾದಕ ವ್ಯಸನದಿಂದ 2014 ರಲ್ಲಿ 3 , 600 ಜನರು ಸಾವನ್ನಪ್ಪಿದ್ದಾರೆ ಎಂದು ಭಾರತ ಸರ್ಕಾರ ಲೋಕಸಭೆಗೆ ತಿಳಿಸಿದೆ.
ಮಾದಕ ವ್ಯಸನ(ಸಾಂಕೇತಿಕ ಚಿತ್ರ ಚಿತ್ರ)
ಮಾದಕ ವ್ಯಸನ(ಸಾಂಕೇತಿಕ ಚಿತ್ರ ಚಿತ್ರ)
Updated on

ನವದೆಹಲಿ: ಮಾದಕ ವ್ಯಸನದಿಂದ 2014 ರಲ್ಲಿ  3 , 600 ಜನರು ಸಾವನ್ನಪ್ಪಿದ್ದಾರೆ ಎಂದು ಭಾರತ ಸರ್ಕಾರ ಲೋಕಸಭೆಗೆ ತಿಳಿಸಿದೆ.

ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ವಿಜಯ್ ಸಂಪ್ಲಾ ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ ಈ ಅಂಕಿಅಂಶ ಬಹಿರಂಗಗೊಂಡಿದೆ. ರಾಷ್ಟ್ರೀಯ ಅಪರಾಧ ದಾಖಲೀಕರಣದ ಪ್ರಕಾರ 2014 ರಲ್ಲಿ 3 ,647 ಜನರು ಮಾದಕ ವ್ಯಸನದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

2012 ರಲ್ಲಿ 4 ,008 ಜನರು ಹಾಗೂ  2013 ರಲ್ಲಿ 4 , 591 ಜನರು ಮಾದಕ ವ್ಯಸನಿಗಳು ಆತ್ಮಹತ್ಯೆಗೆ ಶರಣಾಗಿದ್ದರು. ಮದ್ಯಪಾನ ಹಾಗೂ ಮಾದಕ ವ್ಯಸನದಿಂದ ಉಂಟಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com