ಕಲ್ಲಿದ್ದಲು ಹಗರಣ: ಮಧುಕೋಡ ಸೇರಿ 8 ಜನರ ವಿಚಾರಣೆ ಇಂದು

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡಾ, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಹೆಚ್.ಸಿ.ಗುಪ್ತಾ ಸೇರಿದಂತೆ 6 ಮಂದಿಯನ್ನು ಶುಕ್ರವಾರ ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸಲಿದೆ ಎಂದು ಹೇಳಲಾಗುತ್ತಿದೆ...
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡಾ (ಸಾಂದರ್ಭಿಕ ಚಿತ್ರ)
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡಾ (ಸಾಂದರ್ಭಿಕ ಚಿತ್ರ)

ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡಾ, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಹೆಚ್.ಸಿ.ಗುಪ್ತಾ ಸೇರಿದಂತೆ 6 ಮಂದಿಯನ್ನು ಶುಕ್ರವಾರ ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸಲಿದೆ ಎಂದು ಹೇಳಲಾಗುತ್ತಿದೆ.

ಕಲ್ಲಿದ್ದಲು ಹಗರಣ ಸಂಬಂಧ ಜುಲೈ.14 ರಂದು ನಡೆದ ವಿಚಾರಣೆ ವೇಳೆ ನ್ಯಾ.ಭರತ್ ಪರಾಶರ್ ಅವರು, ಸರ್ಕಾರಿ ನೌಕರರಾದ ಬಸಂತ್ ಕುಮಾರ್ ಭಟ್ಟಾಚಾರ್ಯ ಹಾಗೂ ಬಿಪಿನ್ ಬಿಹಾರಿ ಸಿಂಗ್, ವಿನಿ ಕಬ್ಬಿಣ ಮತ್ತು ಉಕ್ಕು ಉದ್ಯೋಗ್ ಲಿಮಿಟೆಡ್(ವಿ.ಐ.ಎಸ್.ಯು.ಎಲ್) ನ ನಿರ್ದೇಶಕ ವೈಭವ್ ತುಲ್ಸ್ಯಾನ್, ಮಧುಕೋಡಾ ಅವರ ಆಪ್ತ ವಿಜಯ್ ಜೋಷಿ ಹಾಗೂ ಲೆಕ್ಕಪರಿಶೋಧಕರ ನವೀನ್ ಕುಮಾರ್ ಸೇರಿದಂತೆ ಹಗರಣಕ್ಕೆ ಸಂಬಂಧಿಸಿದ ಒಟ್ಟು 9 ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಐಪಿಸಿ ಸೆಕ್ಷನ್ 120 ಬಿ ( ಕ್ರಿಮಿನಲ್ ಸಂಚು) 420 (ಮೋಸ) ಪ್ರಕಾರ ಪ್ರತಿಯೊಬ್ಬ ಆರೋಪಿಯ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಸಿಬಿಐ ಪೊಲೀಸರಿಗೆ ಸೂಚನೆ ನೀಡಿದ್ದರು.

ನ್ಯಾಯಾಧೀಶರ ಸೂಚನೆಯಂತೆ ಸಿಬಿಐ ಪೊಲೀಸರು 9 ಆರೋಪಿಗಳ ವಿರುದ್ಧವೂ ದೋಷಾರೋಪ ಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಈ ದೋಷಾರೋಪ ಪಟ್ಟಿಯನ್ನು ಪರಿಶೀಲಿಸಿರುವ ಸಿಬಿಐ ವಿಶೇಷ ನ್ಯಾಯಾಲಯವು ಮಧುಕೋಡಾ, ಹೆಚ್.ಸಿ ಗುಪ್ತಾ, ಜಾರ್ಖಂಡ್ ನ ಮಾಜಿ ಮುಖ್ಯ ಕಾರ್ಯದರ್ಶಿ ಅಶೋಕ್ ಕುಮಾರ್ ಬಸು ಸೇರಿದಂತೆ ಒಟ್ಟು 9 ಮಂದಿಯನ್ನು ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.

ಕಲ್ಲಿದ್ದಲು ಹಂಚಿಕೆಯಲ್ಲಿ ಮಧು ಕೊಡ ಹಾಗೂ ಜಾರ್ಖಂಡ್ ನ ಮಾಜಿ ಮುಖ್ಯ ಕಾರ್ಯದರ್ಶಿ ಅಶೋಕ್ ಬಸು ವಿನಿ ಕಬ್ಬಿಣ ಮತ್ತು ಉಕ್ಕು ಉದ್ಯೋಗ್ ಸಂಸ್ಥೆಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಸಂಚು ರೂಪಿಸಿದ್ದರು ಎಂದು ಸಿಬಿಐ ಈ ಹಿಂದೆ ಕೋರ್ಟ್ ಗೆ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com