ವ್ಯಾಪಂ ಹಗರಣ: ಮತ್ತೆ 64 ಮಂದಿ ವಿರುದ್ಧ ಎಫ್‌ಐಆರ್

ಮಧ್ಯಪ್ರದೇಶದ ಬಹುಕೋಟಿ ವ್ಯಾಪಂ(ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ) ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಮತ್ತೆ ಹೊಸದಾಗಿ 64...
ವ್ಯಾಪಂ ವಿರುದ್ಧ ಪ್ರತಿಭಟನೆ(ಸಂಗ್ರಹ ಚಿತ್ರ)
ವ್ಯಾಪಂ ವಿರುದ್ಧ ಪ್ರತಿಭಟನೆ(ಸಂಗ್ರಹ ಚಿತ್ರ)

ನವದೆಹಲಿ: ಮಧ್ಯಪ್ರದೇಶದ ಬಹುಕೋಟಿ ವ್ಯಾಪಂ(ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ)  ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಮತ್ತೆ ಹೊಸದಾಗಿ 64 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

2013ರಲ್ಲಿ ವ್ಯಾಪಂ ನಡೆಸಿದ ಪೊಲೀಸ್ ಪೇದೆ ಪರೀಕ್ಷೆಯಲ್ಲೂ ಭಾರಿ ಅಕ್ರಮ ನಡೆದಿದ್ದು, ಈ ಸಂಬಂಧ 64 ಆರೋಪಿಗಳ ವಿರುದ್ಧ ಸಿಪಿಐ ಎಫ್‌ಐಆರ್ ದಾಖಲಿಸಿದೆ.

ಈ ಮುಂಚೆ ಸುಪ್ರೀಂ ಕೋರ್ಟ್, ಜುಲೈ 31ರೊಳಗೆ ವ್ಯಾಪಂ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಸಿಬಿಐಗೆ ಸೂಚಿಸಿತ್ತು.

ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ ನಿಗೂಢ ಸಾವಿನ ಬಹುಕೋಟಿ ವ್ಯಾಪಂ ಹಗರಣದ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಮಧ್ಯಪ್ರದೇಶ ಸರ್ಕಾರ, ಕಾಂಗ್ರೆಸ್ ಮುಖಂಡ ಸೇರಿದಂತೆ ಐವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com