ಮೋದಿ ಕನಸಿನ ಮೇಕ್ ಇನ್ ಇಂಡಿಯಾ ಲೋಗೋದ ಸಿಂಹ ಬಂದಿದ್ದು ಸ್ವಿಜರ್ಲೆಂಡ್ ನಿಂದ !

ಭಾರತವನ್ನು ಜಾಗತಿಕ ಉತ್ಪದನಾ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಹಾಗೂ ಮಹತ್ವದ ಉದ್ದೇಶಗಳನ್ನು ಹೊಂದಿರುವ......
ಮೇಕ್ ಇನ್ ಇಂಡಿಯಾ ಲೋಗೋ
ಮೇಕ್ ಇನ್ ಇಂಡಿಯಾ ಲೋಗೋ

ನವದೆಹಲಿ: ಭಾರತವನ್ನು ಜಾಗತಿಕ ಉತ್ಪದನಾ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ  ಹಾಗೂ ಮಹತ್ವದ ಉದ್ದೇಶಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಕನಸಿನ ಯೋಜನೆಯ ಲೋಗೋ ಸಿಂಹ ಸ್ವಿಜರ್ಲೆಂಡ್ ನಿಂದ ನಕಲು ಮಾಡಿದ್ದು ಎನ್ನುವ ವಿಷಯ ಎಲ್ಲೆಡೆ ಹರಿದಾಡುತ್ತಿದೆ.

ಸಿಂಹದ ಹೆಜ್ಜೆ ಎಂಬ ಘೋಷ ವಾಕ್ಯದೊಂದಿಗೆ ಶಕ್ತಿ ಶಾಲಿ ಸಿಂಹ ಇರುವ ಲೋಗೋ ಬಿಡುಗಡೆ ಮಾಡುವ ವೇಳೆ ಮೋದಿ,  ಶಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿ ಸಿಂಹ ಇದೆ ಎಂದು ಹೇಳಿದ್ದರು. ಆದರೆ ಮೇಕ್ ಇನ್ ಇಂಡಿಯಾ ಲೋಗೋ  ವಿದೇಶದ್ದೂ ಎಂಬುದು ಮೇಕ್ ಇನ್ ಇಂಡಿಯಾ ಹಾಗೂ ಮೋದಿ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ,
ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆ ಭಾರತೀಯ
ಆರ್ಥಿಕತೆಯನ್ನು ಜಾಗತಿಕ ಮಟ್ಟದಲ್ಲಿ ಉನ್ನತೀಕರಿಸುವುದು ಹಾಗೂ ಭಾರತೀಯರಿಗೆ  ಮಿಲಿಯನ್ ಗಟ್ಟಲೇ ಉದ್ಯೋಗವಕಾಶ ಕಲ್ಪಿಸುವುದು ಇದರ ಉದ್ದೇಶ. ಆದರೆ ಅಭಿಯಾನದ ಪ್ರಮುಖ ಚಿಹ್ನೆಯನ್ನು  ಸ್ಜಿಟರ್ಲೆಂಡ್ ನ ಕ್ಯಾಂಟೋನಲ್ ಬ್ಯಾಂಕ್ ಆಪ್ ಜ್ಯುರಿಚ್ ನಿಂದ ನಕಲಿ ಮಾಡಿದ್ದು ಎಂಬುದು ಭ್ರಮ ನಿರಸನ ಮೂಡಿಸಿದೆ.

ಭಾರತ ಸರ್ಕಾರ ಸೆಪ್ಚಂಬರ್ 26, 2014 ರಂದು ಮೇಕ್ ಇನ್ ಇಂಡಿಯಾ ಯೋಜನೆಗೆ ಈ ಚಿಹ್ನೆಯೊಂದಿಗೆ ಚಾಲನೆ ನೀಡಿತು. ಆದರೆ ಜುಲೈ, 4 2013 ರಂದು ಸ್ವಿಸ್ ವಿನ್ಯಾಸಕ ನಡೈನ್ ಜಿಯಸ್ಬುಲ್ಲರ್ ತಾನು ವಿನ್ಯಾಸ ಮಾಡಿದ ಸಿಂಹದ ಕಲಾಕೃತಿಯಡಿ ಬ್ಯಾಂಕಿನ ಪ್ರಚಾರ ಆರಂಭಿಸಿರುವುದಾಗಿ ಟ್ವೀಟ್ ಮಾಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com