ತಸ್ಲೀಮಾರನ್ನು ಅಮೆರಿಕಕ್ಕೆ ಸ್ಥಳಾಂತರಿಸಿದ ಎನ್‍ಜಿಒ

ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ವಿವಾದಿತ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಅವರನ್ನು ಎನ್‍ಜಿಒವೊಂದು ಅಮೆರಿಕಕ್ಕೆ ಸ್ಥಳಾಂತರಿಸಿದೆ.
ಲೇಖಕಿ ತಸ್ಲೀಮಾ ನಸ್ರೀನ್
ಲೇಖಕಿ ತಸ್ಲೀಮಾ ನಸ್ರೀನ್

ನವದೆಹಲಿ: ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ವಿವಾದಿತ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಅವರನ್ನು ಎನ್‍ಜಿಒವೊಂದು ಅಮೆರಿಕಕ್ಕೆ ಸ್ಥಳಾಂತರಿಸಿದೆ.

ಲೇಖಕಿಯನ್ನು ಸುರಕ್ಷಿತ ಪ್ರದೇಶದಲ್ಲಿರಿಸುವ ಸಲುವಾಗಿ ಅವರನ್ನು ಮೇ 27ರಂದೇ ನ್ಯೂಯಾರ್ಕ್‍ಗೆ ಕರೆದೊಯ್ದಿರುವುದಾಗಿ ಅಮೆರಿಕ ಮೂಲದ ಎನ್‍ಜಿಒ `ಸೆಂಟರ್ ಫಾರ್ ಎಂಕ್ವಾಯಿರಿ' ತಿಳಿಸಿದೆ. ಜತೆಗೆ, ತಸ್ಲೀಮಾರಿಗೆ ನೆರವಾಗಲೆಂದು ಅಲ್ಲಿ ತುರ್ತು ನಿಧಿಯೊಂದನ್ನು ಸ್ಥಾಪಿಸಿರುವುದಾಗಿಯೂ ಮಾಹಿತಿ ನೀಡಿದೆ ಎಂದು ಖಾಸಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಬಾಂಗ್ಲಾದೇಶ ಸೇರಿದಂತೆ ಹಲವು ರಾಷ್ಟ್ರಗಳಲ್ಲಿರುವ ಅಲ್‍ಖೈದಾ ಸಂಪರ್ಕಿತ ಉಗ್ರ ಸಂಘಟನೆಗಳಿಂದ ತಸ್ಲೀಮಾಗೆ ಜೀವಬೆದರಿಕೆಯಿದೆ. ಇತ್ತೀಚೆಗಷ್ಟೇ ಬಾಂಗ್ಲಾದಲ್ಲಿ 3 ಮಂದಿ ಜಾತ್ಯತೀಯ ಬ್ಲಾಗರ್‍ಗಳನ್ನು ಉಗ್ರರು ಹತ್ಯೆಗೈದಿದ್ದರು. ನಮ್ಮ ಮುಂದಿನ ಟಾರ್ಗೆಟ್ ತಸ್ಲೀಮಾ ಎಂದೂ ಅವರು ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com