ಮೇಕ್ ಇನ್ ಇಂಡಿಯಾ ಲೋಗೋ ಕದ್ದಿದ್ದಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಮೇಕ್ ಇನ್ ಇಂಡಿಯಾ ಗೆ ಬಳಸಿರುವ ಲೋಗೋ ಸ್ವಿಜರ್ಲೆಂಡ್ ಬ್ಯಾಂಕ್ ನ......
ಮೇಕ್ ಇನ್ ಇಂಡಿಯಾ ಲೋಗೋ
ಮೇಕ್ ಇನ್ ಇಂಡಿಯಾ ಲೋಗೋ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಮೇಕ್ ಇನ್ ಇಂಡಿಯಾ ಗೆ ಬಳಸಿರುವ ಲೋಗೋ ಸ್ವಿಜರ್ಲೆಂಡ್ ಬ್ಯಾಂಕ್ ನ ನಕಲು ಎಂಬ ವರದಿಗೆ ಕೇಂದ್ರ ಎನ್ ಡಿ ಎ ಸರ್ಕಾರ ಸ್ಪಷ್ಟನೆ ನೀಡಿದೆ.

ಮೇಕ್ ಇನ್ ಇಂಡಿಯಾ ಲೋಗೋ ಕದ್ದಿದ್ದಲ್ಲ ಎಂದು ಹೇಳಿರುವ ಮೋದಿ ಸರ್ಕಾರ ವರದಿಯನ್ನು ತಳ್ಳಿ ಹಾಕಿದೆ. ಭಾರತದ ಉತ್ಪದನಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ ಸಣ್ಣ ಉದ್ದಿಮೆಗಳ ಅಭಿವೃದ್ಧಿಗಾಗಿ 2014 ರಲ್ಲಿ ಮೋದಿ ಸರ್ಕಾರ ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೊಳಿಸಿತ್ತು.
ಇದಕ್ಕಾಗಿ ವಿವಿಧ ಕ್ಷೇತ್ರಗಳ ಪರಿಚಯ ನೀಡುವ  ಒಳಭಾಗ ಹೊಂದಿರುವ ಸಿಂಹದ ಆಕೃತಿಯನ್ನು ಅಧಿಕೃತ ಚಿಹ್ನೆಯಾಗಿ ಬಳಸಲಾಗಿತ್ತು.

ಆದರೆ ಇದು ಸ್ವಿಜರ್ಲೆಂಡ್ ನ ಜ್ಯೂರಿಚ್ ಬ್ಯಾಂಕ್ ವೊಂದರ ಲೋಗೋ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಮೋದಿ ಅವರ ನೆಚ್ಚಿನ ಸಿಂಹ ಹೆಜ್ಜೆ ಸ್ವಿಜರ್ಲೆಂಡ್ ನಿಂದ ಬಂದಿದ್ದೇ, ಅಥವಾ ವಿದೇಶದ ಲೋಗೋವನ್ನು ನಕಲು ಮಾಡಲಾಯಿತೇ ಎಂಬ ಪ್ರಶ್ನೆಗಳು ಎದ್ದಿವೆ.

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಮೇಕ್ ಇನ್ ಇಂಡಿಯಾ ಗೆ ಬಳಸಿರುವ ಲೋಗೋ ಸ್ವಿಜರ್ಲೆಂಡ್ ಬ್ಯಾಂಕ್ ನ ನಕಲು ಎಂಬ ವರದಿಗೆ ಕೇಂದ್ರ ಎನ್ ಡಿ ಎ ಸರ್ಕಾರ ಸ್ಪಷ್ಟನೆ ನೀಡಿದೆ.

ಮೇಕ್ ಇನ್ ಇಂಡಿಯಾ ಲೋಗೋ ಕದ್ದಿದ್ದಲ್ಲ ಎಂದು ಹೇಳಿರುವ ಮೋದಿ ಸರ್ಕಾರ ವರದಿಯನ್ನು ತಳ್ಳಿ ಹಾಕಿದೆ. ಭಾರತದ ಉತ್ಪದನಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ ಸಣ್ಣ ಉದ್ದಿಮೆಗಳ ಅಭಿವೃದ್ಧಿಗಾಗಿ 2014 ರಲ್ಲಿ ಮೋದಿ ಸರ್ಕಾರ ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೊಳಿಸಿತ್ತು.
ಇದಕ್ಕಾಗಿ ವಿವಿಧ ಕ್ಷೇತ್ರಗಳ ಪರಿಚಯ ನೀಡುವ  ಒಳಭಾಗ ಹೊಂದಿರುವ ಸಿಂಹದ ಆಕೃತಿಯನ್ನು ಅಧಿಕೃತ ಚಿಹ್ನೆಯಾಗಿ ಬಳಸಲಾಗಿತ್ತು.

ಆದರೆ ಇದು ಸ್ವಿಜರ್ಲೆಂಡ್ ನ ಜ್ಯೂರಿಚ್ ಬ್ಯಾಂಕ್ ವೊಂದರ ಲೋಗೋ ಇದಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಮೋದಿ ಅವರ ನೆಚ್ಚಿನ ಸಿಂಹ ಹೆಜ್ಜೆ ಸ್ವಿಜರ್ಲೆಂಡ್ ನಿಂದ ಬಂದಿದ್ದೆ, ಅಥವಾ ವಿದೇಶದ ಲೋಗೋವನ್ನು ನಕಲು ಮಾಡಲಾಯಿತೇ ಎಂಬ ಪ್ರಶ್ನೆಗಳು ಎದ್ದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com