ಅಡಕೆ ಆಮದಿಗೆ ನಿಯಂತ್ರಣ

ದೇಶೀ ಮಾರುಕಟ್ಟೆಯಲ್ಲಿ ಆಮದು ಅಡಕೆಯ ಆಟಾಟೋಪದಿಂದ ಕಂಗೆಟ್ಟಿದ್ದ ಕರ್ನಾಟಕ ಸೇರಿದಂತೆ ದೇಶದ ಅಡಕೆ ಬೆಳೆಗಾರರಿಗೊಂದು ಖುಷಿಯ ಸುದ್ದಿ. ದೇಶಿ ಅಡಕೆ ...
ಅಡಕೆ
ಅಡಕೆ

ನವದೆಹಲಿ: ದೇಶೀ ಮಾರುಕಟ್ಟೆಯಲ್ಲಿ ಆಮದು ಅಡಕೆಯ ಆಟಾಟೋಪದಿಂದ ಕಂಗೆಟ್ಟಿದ್ದ ಕರ್ನಾಟಕ ಸೇರಿದಂತೆ ದೇಶದ ಅಡಕೆ ಬೆಳೆಗಾರರಿಗೊಂದು ಖುಷಿಯ ಸುದ್ದಿ. ದೇಶಿ ಅಡಕೆ ಬೆಳೆಗಾರರ ಹಿತ ಕಾಪಾಡಲು ಕೇಂದ್ರ ಸರ್ಕಾರ ಆಮದಿನ ಮೇಲೆ ನಿಯಂತ್ರಣವೇರಲು ಮುಂದಾಗಿದೆ. ಪ್ರತಿ ಕೆ.ಜಿ. ಅಡಕೆ ಮೇಲಿನ ಕನಿಷ್ಠ ಆಮದು ದರ(ಎಂಐಪಿ)ವನ್ನು  ರು.52ರಷ್ಟು ಹೆಚ್ಚಿಸಿದೆ. ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದ(ಎಸ್‍ಎಎಫ್ ಟಿಎ)ದಲ್ಲಿ ಕಡಿಮೆ ಆಮದು ಸುಂಕ ವಿಧಿಸುವುದರಿಂದ ನೆರೆಯ ರಾಜ್ಯಗಳಿಂದ ಕಡಿಮೆ ಬೆಲೆಗೆ ಅಡಕೆ ಆಮದಾ ಗುತ್ತಿತ್ತು. ಇದರಿಂದ ತಮಗೆ ನಷ್ಟ ಆಗುತ್ತಿದೆ ಎಂದು ದೇಶದ ಅಡಕೆ ಬೆಳೆಗಾರರು, ಖರೀದಿ ಕಂಪನಿಗಳು ಸರ್ಕಾರಕ್ಕೆ ಹಲವುಬಾರಿ ಮನವಿ ಸಲ್ಲಿಸಿದ್ದವು. ಈ ಮನವಿಯನ್ನು ಪುರಸ್ಕರಿಸಿದ ಸರ್ಕಾರ ಆಮದಿತ ಅಡಕೆಯ ಕನಿಷ್ಠ ಆಮದು ದರವನ್ನು ರು. 162ಕ್ಕೆ ಹೆಚ್ಚಿಸಿದೆ. ಈ ಹಿಂದೆ ಈ ದರ ರು. 110 ಇತ್ತು.
2006ರ ಒಪ್ಪಂದ:
ಭಾರತ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳು 2006ಲ್ಲಿ ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಿದ್ದವು. ಈ ಒಪ್ಪಂದದಡಿ ನೆರೆಯ ದೇಶಗಳಿಂದ ಭಾರತಕ್ಕೆ ಆಮದಾಗುವ ಅಡಕೆಗೆ ಎಂಐಪಿ ನಿಗದಿಪಡಿಸಲಾಗಿತ್ತು. ಅದರಂತೆ ವಿದೇಶದಿಂದ ಎಂಐಪಿ ಅಥವಾ ಅದಕ್ಕಿಂತ ಹೆಚ್ಚಿನ ದರಕ್ಕೇ ಅಡಕೆ ಆಮದು ಮಾಡಿಕೊಳ್ಳಬೇಕಿದೆ.

ಪರಿಶೀಲನೆಗೆ ಸೂಚನೆ: ಉನ್ನತ ಗುಣಮಟ್ಟದ ಹೆಸರಿನಲ್ಲಿ ಕಳಪೆ ಗುಣಮಟ್ಟದ ಅಡಕೆಯನ್ನು ಆಮದು ಮಾಡಿಕೊಳ್ಳುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಹಾಗೂ ಅನ್ಯ ದೇಶಗಳ ಅಡಕೆ ಭಾರತದ ನೆರೆಯ ದೇಶಗಳ ಮೂಲಕ ಆಮದಾಗುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷಿತೆ ಮತ್ತು ಗುಣಮಟ್ಟಗಳ ಪ್ರಾಧಿಕಾರ(ಎಎಸ್‍ಎಸ್‍ಎ) ಕೂಡ ತನ್ನ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಆಮದಾಗುವ ಅಡಕೆಗಳ ಗುಣಮಟ್ಟ ಪರಿಶೀಲಿಸುವಂತೆ ಸೂಚಿಸಿದೆ. ಕಡಿಮೆ ಗುಣಮಟ್ಟದ ಅಡಕೆ ದೇಶದೊಳಗೆ ಕಾಲಿಟ್ಟರೆ ದೇಶೀ ಅಡಕೆ ಮಾರುಕಟ್ಟೆ ಅಸ್ಥಿರಗೊಳ್ಳಬಹುದು ಎನ್ನುವ ಉದ್ದೇಶದಿಂದ ಬಾರದು ಎನ್ನುವ ಉದ್ದೇಶದಿಂದ ಈ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ.

ಕರ್ನಾಟಕದಲ್ಲೇ ಹೆಚ್ಚು

ದೇಶದಲ್ಲೇ ಅತಿಹೆಚ್ಚು ಅಡಕೆ ಬೆಳೆಯುವ ರಾಜ್ಯ ಕರ್ನಾಟಕ. ನಂತರದ ಸ್ಥಾನದಲ್ಲಿ ಕೇರಳ ಹಾಗೂ ಅಸ್ಸಾಂ ಇದೆ. ಸರ್ಕಾರದ ಈ ನಿರ್ಧಾರದಿಂದ ಕರ್ನಾಟಕದ ರೈತರಿಗೆ ಅತಿ ಹೆಚ್ಚಿನ ಅನುಕೂಲವಾಲಿದೆ. ವರದಿಯೊಂದರ ಪ್ರಕಾರ, 2012- 13ರಲ್ಲಿ ಆಮದಿತ ಅಡಕೆ ಮೌಲ್ಯ ಶೇ.120ರಷ್ಟು ಹೆಚ್ಚಳವಾಗಿದೆ. 2012- 13ರಲ್ಲಿ  612.78 ಕೋಟಿ ಮೌಲ್ಯದ ಅಡಕೆ ಆಮದಾಗಿತ್ತು. 2011- 12ರಲ್ಲಿ ಆಮದು ಮೌಲ್ಯ ರು.278.13 ಕೋಟಿಯಾಗಿತ್ತು.
ಭಾರತಕ್ಕೆ ಬಾಂಗ್ಲಾದೇಶದಿಂದ ಅತಿ ಹೆಚ್ಚು ಪ್ರಮಾಣದಲ್ಲಿ ಅಡಕೆ ಆಮದಾಗುತ್ತದೆ.

ವಿದೇಶದಿಂದ ಬರುವ ಅಡಕೆಗೆ ಕನಿಷ್ಠ ಆಮದು ದರ ಹೆಚ್ಚಳವಾಗಿದೆ. ಇಷ್ಟು ಸಾಲದು, ಮತ್ತಷ್ಟು ಆಮದು ದರ ಹೆಚ್ಚಳ ಮಾಡಬೇಕು.
- ಆರ್. ದೇವಾನಂದ್
ನಿರ್ದೇಶಕರು, ಕರ್ನಾಟಕ ರಾಜ್ಯ
ಅಡಕೆ ಮಾರಾಟ ಮಹಾ ಮಂಡಳಿ

ಈಗ ಆಮದು ಸುಂಕ ಏರಿಕೆಯಾದ ಪರಿಣಾಮ ಅಮದು ಕಡಿಮೆಯಾಗುತ್ತದೆ. ಆಗ ಸಹಜವಾಗಿ ನಮ್ಮ ಅಡಕೆಗೆ ಬೇಡಿಕೆ ಹೆಚ್ಚಾಗುತ್ತದೆ. ಆಗ ಅಡಕೆ ದರ ಏರುತ್ತದೆ. ವಿದೇಶದಿಂದ ಅಡಕೆ ಆಮದು ಹೆಚ್ಚಾಗಿ ಕಿಲೊಗೆ ರು. 430 ಇದ್ದದ್ದು ರು.330ಕ್ಕೆ ಇಳಿದಿತ್ತು. ಈಗಿರುವ ದರ ಸ್ಥಿರವಾಗಿದ್ದರೆ ಬೆಳೆಗಾರ ಬದುಕುತ್ತಾನೆ.

- ಕೊಂಕೋಡಿ ಪದ್ಮನಾಭ, ಕ್ಯಾಂಪ್ಕೋ ಅಧ್ಯಕ್ಷ

ಅಡಕೆಗೆ ಆಮದು ಸುಂಕ ಹೆಚ್ಚಿಸಿರುವುದುಸ್ವಾಗತಾರ್ಹ ಸಂಗತಿ. ಇದರಿಂದ ನಮ್ಮ ಅಡಕೆ ಬೆಳೆಗಾರರಿಗೆ ಅನುಕೂಲ ಉಂಟಾಗಲಿದೆ.
-ಶಾಂತಾರಾಮ ಹೆಗಡೆ, ಅಧ್ಯಕ್ಷರು, ಟಿಎಸ್‍ಎಸ್, ಶಿರಸಿ

ಆಮದು ಸುಂಕ ಹೆಚ್ಚಳ ಮಾಡಿದ್ದು ಸಮಾಧಾನಕರ ಸಂಗತಿ. ಸುಂಕವನ್ನು ಇನ್ನಷ್ಟು ಹೆಚ್ಚಿಸಬೇಕು. ಅಡಕೆ ಆಮದನ್ನು ನಿಷೇಧಿಸುವುದು ಇನ್ನೂ ಉತ್ತಮವಾದ ಆಮದು ಸುಂಕ ಜಾಸ್ತಿ ಮಾಡಿರುವುದು ಒಳ್ಳೆಯದಾಯ್ತು. ಇದರಿಂದ ಅಡಕೆ ಧಾರಣೆ ಹೆಚ್ಚಳವಾಗಲಿದೆ. ಈವರೆಗೆ ವಿದೇಶಿ ಅಡಕೆ ತಂದು ಮಿಶ್ರಣ ಮಾಡುತ್ತಿದ್ದರು. ಇನ್ನು ಅದರ ಪ್ರಮಾಣ ಕಡಿಮೆಯಾಗಲಿದೆ. ಉತ್ತಮ ಗುಣಮಟ್ಟದ ಅಡಕೆ ಮಾರಾಟಕ್ಕೆ ಸಿಗಲಿದೆ.
-ಅನಂತ ಪ್ರಸಾದ್ ನೈತ್ತಡ್ಕ, ಅಡಕೆ ಬೆಳೆಗಾರ



ಆಮದು ಸುಂಕ ಹೆಚ್ಚಳ ಮಾಡಿದ್ದು ಸಮಾಧಾನಕರ ಸಂಗತಿ. ಸುಂಕವನ್ನು ಇನ್ನಷ್ಟು ಹೆಚ್ಚಿಸಬೇಕು. ಅಡಕೆ ಆಮದನ್ನು ನಿಷೇಧಿಸುವುದು ಇನ್ನೂ ಉತ್ತಮವಾದ
ನಿರ್ಧಾರವಾಗುತ್ತಿತ್ತು.
- ಆರ್.ಜಿ. ಭಟ್ ಕುಮಟಾ, ಅಡಕೆ ದಲಾಲರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com