ಧನುರ್ವಾಯು ಮುಕ್ತ ಭಾರತ ಕನಸು ನನಸು

ಪೊಲಿಯೋ ಮುಕ್ತ ಭಾರತದಕನಸು ನನಸಾಯ್ತು. ಈಗ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ದೇಶ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಭಾರತ ಈಗ...
ಅಮ್ಮ ಮತ್ತು ಮಗು
ಅಮ್ಮ ಮತ್ತು ಮಗು
Updated on

ನವದೆಹಲಿ: ಪೊಲಿಯೋ ಮುಕ್ತ ಭಾರತದಕನಸು ನನಸಾಯ್ತು. ಈಗ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ  ದೇಶ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.  ಭಾರತ ಈಗ ಧನುರ್ವಾಯುವಿನಿಂದಲೂ ಮುಕ್ತವಾಗಿದೆ. ಹೌದು, ಭಾರತದ ಈ ಸಾಧನೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಇದಕ್ಕಾಗಿ ದೇಶದ ಆರೋಗ್ಯಸೇವಕರಿಗೂ ಡಬ್ಲ್ಯುಎಚ್‍ಒ ಅಭಿನಂದನೆ ಸಲ್ಲಿಸಿದೆ. ಕಳೆದ ವರ್ಷವಷ್ಟೇ ಭಾರತಪೋಲಿಯೋದಿಂದ ಮುಕ್ತವಾದ ಸಾಧನೆ ಮಾ್ಡಿತ್ತು. ಮೇ 15ರಂದೇ ಭಾರತ ಧನುರ್ವಾಯುವಿನಿಂದ ಮುಕ್ತವಾಗಿತ್ತು. ನಾಗಾಲ್ಯಾಂಡ್ ಧನುರ್ವಾಯುವಿನಿಂದ ಮುಕ್ತವಾದ ಭಾರತದಕೊನೆಯ ರಾಜ್ಯವಾಗಿದೆ ಎಂದು ವಿಶ್ವ ಆರೋಗ್ಯಸಂಸ್ಥೆಯ ಉಪ ಪ್ರಾದೇಶಿಕ  ನಿರ್ದೇಶಕ  ಖೇತ್ರಪಾಲ್ ಸಿಂಗ್ ಹೇಳಿದ್ದಾರೆ. 2005ರಲ್ಲಿ ಚಾಲನೆಗೊಂಡಿದ್ದ ರಾಷ್ಟ್ರೀಯ ಆರೋಗ್ಯ ಯೋಜನೆಯಿಂದಾಗಿ ಇದೆಲ್ಲ
ಸಾಧ್ಯವಾಯಿತು. ಗ್ರಾಮೀಣ ಮಟ್ಟದಲ್ಲಿ ಸುರಕ್ಷಿತಹೆರಿಗೆಯ ಭಾಗವಾಗಿರುವ ನರ್ಸ್‍ಗಳು, ಹೆರಿಗೆಸಹಾಯಕರಿಗೆ ನೀಡಿದ ತರಬೇತಿ ಕೊನೆಗೂ ಫಲನೀಡಿತು . 1983ರಿಂದ  ಭಾರತದಲ್ಲಿ  ಎಲ್ಲ ಗರ್ಭಿಣಿಯರಿಗೆ ಟಿಟಾನಸ್ ಟಾಕ್ಸೈಡ್ ಲಸಿಕೆಯಎರಡು ಡೋಸ್‍ಗಳನ್ನು ಕಡ್ಡಾಯ ಮಾಡಲಾಗಿತ್ತು. ಆದರೆ, 1990ರಲ್ಲಿ ಧನುರ್ವಾಯುವಿನಿಂದ 80 ಸಾವಿರ ನವಜಾತ ಶಿಶುಗಳು
ಮತಪಟ್ಟಿದ್ದವು. ಆದರೆ , 2013 ಮತ್ತು 2014ರಲ್ಲಿ ಕೇವಲ 500 ಧನುರ್ವಾಯು ಪ್ರಕರಣಗಳಷ್ಟೇ ದಾಖಲಾಗಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com