ಪ್ರವಾಹ, ಪೆಟ್ರೋಲ್ ಬಂಕ್‌ ಸ್ಪೋಟ: 150 ಮಂದಿ ದಾರುಣ ಸಾವು

ಎಡಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ ಪೆಟ್ರೋಲ್ ಬಂಕ್‌ವೊಂದರ ಕೆಳಗೆ ನೂರಾರು ಮಂದಿ ರಕ್ಷಣೆ ಪಡೆಯುತ್ತಿದ್ದ ವೇಳೆ ಬಂಕ್ ಸ್ಫೋಟಗೊಂಡ...
ಪೆಟ್ರೋಲ್ ಬಂಕ್‌ ಸ್ಪೋಟ
ಪೆಟ್ರೋಲ್ ಬಂಕ್‌ ಸ್ಪೋಟ

ಘಾನಾ(ಪಶ್ಚಿಮ ಆಫ್ರಿಕಾ): ಎಡಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ ಪೆಟ್ರೋಲ್ ಬಂಕ್‌ವೊಂದರ ಕೆಳಗೆ ನೂರಾರು ಮಂದಿ ರಕ್ಷಣೆ ಪಡೆಯುತ್ತಿದ್ದ ವೇಳೆ ಬಂಕ್ ಸ್ಫೋಟಗೊಂಡ ಪರಿಣಾಮ 96 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಅಕ್ರಾದಲ್ಲಿ ನಡೆದಿದೆ.  

ಪೆಟ್ರೋಲ್ ಬಂಕ್‌ವೊಂದರ ಕೆಳಗೆ ನೂರಾರು ಮಂದಿ ಮಳೆಯಿಂದ ರಕ್ಷಣೆ ಪಡೆಯುತ್ತಿದ್ದ ವೇಳೆ ಪೆಟ್ರೋಲ್ ಬಂಕ್ ಸ್ಫೋಟಗೊಂಡಿದೆ. ಇದರಲ್ಲಿ 96 ಮಂದಿ ಸಾವನ್ನಪ್ಪಿದು, ಪ್ರವಾಹದಿಂದಾಗಿ ಒಟ್ಟು 150 ಮಂದಿ ಮೃತಪಟ್ಟಿದ್ದಾರೆ. ಇದೊಂದು ದುರದೃಷ್ಟಕರ ಘಟನೆ ಎಂದು ಅಧ್ಯಕ್ಷ ಜಾನ್ ಮಹಮಾ ಹೇಳಿದ್ದಾರೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಇದರಿಂದಾಗಿ ನೂರಾರು ಜನರು ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಮಳೆ ಸುರಿಯುತ್ತಿದ್ದ ಕಾರಣ ದಕ್ಷಿಣ ಆಫ್ರಿಕಾದ ಅಕ್ರಾದ ಪೆಟ್ರೋಲ್‌ ಬಂಕ್‌ನ ಶೆಲ್ಟರ್‌ನ ಅಡಿ ನಿಂತು ನೂರಾರು ಮಂದಿ ಮಳೆಯಿಂದ ರಕ್ಷಣೆ ಪಡೆಯುತ್ತಿದ್ದರು. ಈ ವೇಳೆ ಬಂಕ್ ಪಕ್ಕದ ಮನೆಯೊಂದರಿಂದ ಬೆಂಕಿಯ ಉಂಡೆಯೊಂದು ಬಂಕ್ ಗೆ ಅಪ್ಪಳಿಸಿತು. ಈ ಅವಘಡ ಸಂಭವಿಸಿದೆ.

ಆಕಸ್ಮಿಕವಾಗಿ ನಡೆದ ಈ ಅವಘಡದಿಂದ ಬಂಕ್ ನಲ್ಲಿ ಆಶ್ರಯ ಪಡೆದಿದ್ದವರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಕ್ಷಣಾರ್ಧದಲ್ಲಿ ಎಲ್ಲರೂ ಸುಟ್ಟು ಬೂದಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com