• Tag results for ಪ್ರವಾಹ

ಯಾದಗಿರಿ: ಪ್ರವಾಹದಿಂದ ಜಲಾವೃತವಾಗಿದ್ದ ಮನೆಯಿಂದ ಕುಟುಂಬದ ಎಂಟು ಮಂದಿ ರಕ್ಷಣೆ

ಶಹಾಪುರದ ಬಾಪುಗೌಡ ನಗರ ಸಮೀಪದ ಹೊಳೆಯಿಂದ ಉಂಟಾಗಿರುವ ಪ್ರವಾಹದ ನೀರಿನಿಂದ ಆವೃತವಾಗಿರುವ ಮನೆಯೊಂದರಿಂದ ಕುಟುಂಬದ ಎಂಟು ಸದಸ್ಯರನ್ನು ಭಾನುವಾರ ರಕ್ಷಿಸಲಾಗಿದೆ.

published on : 29th June 2020

ಕೊರೋನಾ ಸಂಕಷ್ಟದ ನಡುವೆಯೇ ರಾಜ್ಯಕ್ಕೆ ಎದುರಾದ ಪ್ರವಾಹ ಭೀತಿ!

ಕೊರೋನಾ ವೈರಸ್ ನಿಂದಾಗಿ ನಲುಗಿ ಹೋಗುತ್ತಿರುವ ರಾಜ್ಯಕ್ಕೆ ಮತ್ತೊಂದು ಸಂಕಷ್ಟ ಕೂಡ ಎದುರಾಗಲಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇದೀಗ ಪ್ರವಾಹ ಭೀತಿ ಎದುರಾಗಿದೆ. 

published on : 27th June 2020

'ಪ್ರವಾಹ'ಕ್ಕೆ ಸರ್ಕಾರದ ಸಿದ್ಧತೆ: ಗ್ರಾಮ ಪಂಚಾಯತ್ ಗಳಲ್ಲಿ ಪ್ರವಾಹ ನಿರ್ವಹಣೆಗೆ ಪ್ರಾಯೋಗಿಕ ಯೋಜನೆ

ಮುಂಗಾರು ಸಮಯದಲ್ಲಿ ಪ್ರವಾಹದಂತಹ ಪರಿಸ್ಥಿತಿಯುಂಟಾದರೆ ಅವುಗಳನ್ನು ನಿಭಾಯಿಸಲು ಗ್ರಾಮ ಪಂಚಾಯತ್ ಗಳಿಗೆ ಪ್ರವಾಹ ನಿರ್ವಹಣೆ ಯೋಜನೆ ಸಿದ್ದಪಡಿಸುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ.

published on : 20th June 2020

2019 ಮಹಾರಾಷ್ಟ್ರ ಪ್ರವಾಹ: ಕರ್ನಾಟಕದಿಂದ ಹೆಚ್ಚಿನ ಹಾನಿಯಾಗಿಲ್ಲ-ತಜ್ಞರ ಸಮಿತಿ

2019 ರಲ್ಲಿ ಮಹಾರಾಷ್ಟ್ರ ಪ್ರವಾಹಕ್ಕೆ ಕರ್ನಾಟಕದ ಆಲಮಟ್ಟಿ ಹಾಗೂ ಹಿಪ್ಪರಗಿ ಜಲಾಶಯಗಳು ಹಾಗೂ ಅಲ್ಲಿನ ಪ್ರವಾಹ ನಿರ್ವಹಣೆ ಕಾರ್ಯಾಚರಣೆಗಳು ಹೆಚ್ಚಿನ ಹಾನಿಯುಂಟುಮಾಡಿಲ್ಲ ಎಂದು ತಜ್ಞರ ಸಮಿತಿ ಹೇಳಿದೆ.

published on : 18th June 2020

ಕೇರಳ ಪ್ರವಾಹ ಸಂದರ್ಭದಲ್ಲಿ 1 ಕೋಟಿ ನೆರವು ನೀಡಿದ್ದ ಸುಶಾಂತ್ ಸಿಂಗ್ ರಜಪೂತ್

ನಿನ್ನೆ ಮೃತಪಟ್ಟ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ 2018ರಲ್ಲಿ ಕೇರಳದಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದ ಸಂದರ್ಭದಲ್ಲಿ ಅಭಿಮಾನಿಯೊಬ್ಬರ ಪರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ. ಧನ ಸಹಾಯ ಮಾಡಿದ್ದರು. ನಂತರ 'ಮೈ ಕೇರಳ' ಹ್ಯಾಷ್ ಟಾಗ್ ನಲ್ಲಿ ಅಭಿಮಾನಿಗಳೊಂದಿಗೆ ಈ ವಿಷಯವನ್ನು ಹಂಚಿಕೊಂಡಿದ್ದರು.

published on : 15th June 2020

ಕೊಡಗು: ಪ್ರವಾಹ ಸಂತ್ರಸ್ತರಿಗೆ 463 ಮನೆಗಳ ಹಸ್ತಾಂತರ

ಭೂಕುಸಿತ ಹಾಗೂ ಪ್ರವಾಹಕ್ಕೆ ಗುರಿಯಾಗಿರುವ ಕೊಡಗು ಜಿಲ್ಲೆಯಲ್ಲಿ 'ಪರಿಹಾರ ಕೇಂದ್ರ'ಕ್ಕಾಗಿ ಶಾಶ್ವತ ಕಟ್ಟಡ ನಿರ್ಮಿಸಲು ಶೀಘ್ರದಲ್ಲೇ 10 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

published on : 5th June 2020

ಪ್ರವಾಹ ಪರಿಸ್ಥಿತಿ, ಪುನರ್ವಸತಿ ಸಮರ್ಪಕ ನಿರ್ವಹಣೆ: ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸುದೀರ್ಘ ಉತ್ತರ

ರಾಜ್ಯದಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ಸರ್ಕಾರ ನಿಭಾಯಿಸಿ ಪುನರ್‌ ವಸತಿ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

published on : 2nd March 2020

ಉತ್ತರ ಕರ್ನಾಟಕ: ಪ್ರವಾಹ ಪೀಡಿತ ಶಾಲೆಗಳ ಪುನರ್ ನಿರ್ಮಾಣಕ್ಕೆ ನಬಾರ್ಡ್ ಧನಸಹಾಯ

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ತನ್ನ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯ ಮೂಲಕ ಉತ್ತರ ಕರ್ನಾಟಕದ 26 ಜಿಲ್ಲೆಗಳ 3,386 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪುನರ್ನಿರ್ಮಾಣಕ್ಕೆ ಧನಸಹಾಯ ನೀಡಲು ಒಪ್ಪಿದೆ.

published on : 19th February 2020

ಇಂಡೋನೇಷ್ಯಾದ  ಸುಮಾತ್ರ  ದ್ವೀಪದಲ್ಲಿ ಪ್ರವಾಹ: ಆರು ಮಂದಿ ಸಾವು, ಮೂವರು ನಾಪತ್ತೆ

ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಬುಧವಾರ ಪ್ರವಾಹ ಉಂಟಾಗಿ ಆರು ಮಂದಿ ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 29th January 2020

ಸಿಎಎ, ಎನ್ ಆರ್ ಸಿ ಮೂಲಕ ದೇಶ ಒಡೆಯುವ ಕೆಲಸಕ್ಕೆ ವಿರಾಮ ನೀಡಿ: ಅಮಿತ್ ಶಾಗೆ ಸಿದ್ದರಾಮಯ್ಯ ಸಲಹೆ

ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿರುವುದು ಸುಳ್ಳು ಹೇಳುವುದಕ್ಕೆ ಹೊರತು ರಾಜ್ಯದ ಜನರ ಸಮಸ್ಯೆ ಬಗೆಹರಿಸಲು ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

published on : 18th January 2020

'ನೆರೆ ಪೀಡಿತ ಸ್ಥಳದ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳ ನೆರವು ಅಗತ್ಯ'

ಶಿಕ್ಷಣ ಇಲಾಖೆ ಅತಿ ದೊಡ್ಡ ಇಲಾಖೆಯಾಗಿದ್ದು, ನಾಡಿನ ಮಕ್ಕಳ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಸಮುದಾಯದ ಸಹಭಾಗಿತ್ವ ತೀರಾ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಬಲಪಡಿಸಲು ಖಾಸಗಿ ವಲಯ ಮುಂದಾಗಬೇಕು  ಶಿಕ್ಷಣ ಸಚಿವವ ಸುರೇಶ್ ಕುಮಾರ್ ಕರೆ ನೀಡಿದ್ದಾರೆ.

published on : 18th January 2020

ರಾಜ್ಯಕ್ಕೆ ಹೆಚ್ಚುವರಿಯಾಗಿ ರೂ.1,869 ಕೋಟಿ ಪ್ರವಾಹ ಪರಿಹಾರ ಸಿಗಲಿದೆ: ಸಿಎಂ ಯಡಿಯೂರಪ್ಪ ಸ್ಪಷ್ಟನೆ

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ ರೂ.1,869 ಕೋಟಿ ಪ್ರವಾಹ ಪರಿಹಾರವಾಗಿ ಸಿಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. 

published on : 11th January 2020

ನೆರೆ ಪರಿಹಾರ ಕಾರ್ಯಗಳಿಗೆ 2ನೇ ಕಂತಿನಲ್ಲಿ ರೂ.669 ಕೋಟಿ ಬಿಡುಗಡೆ ಮಾಡಿದ ಕೇಂದ್ರ!

ಭೀಕರ ಪ್ರವಾಹಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಎರಡನೇ ಕಂತಿನಲ್ಲಿ ರೂ.669 ಕೋಟಿ ಪರಿಹಾರ ಬಿಡುಗಡೆ ಮಾಡಿದೆ. 

published on : 8th January 2020

ಕೇಂದ್ರ ಸರ್ಕಾರ ಕೊಟ್ಟಿರುವ ನೆರೆ ಪರಿಹಾರ ಸಾಲದು: ಸಿಎಂ ಯಡಿಯೂರಪ್ಪ

ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರದ ಮೊತ್ತ ಸಾಕಾಗುವುದಿಲ್ಲ. ಇದೂವರೆಗೆ ಎರಡು ಕಂತುಗಳಲ್ಲಿ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಮತ್ತಷ್ಟು ಪರಿಹಾರ ಸಿಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. 

published on : 8th January 2020

ಬಾಗಲಕೋಟೆ: ಐಟಿ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ಥರ ಮನೆ ಮೇಲೆ ದಾಳಿ!

ಐಟಿ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ತನ ಮನೆ ಮೇಲೆ ದಾಳಿ ಮಾಡಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

published on : 4th January 2020
1 2 3 4 5 6 >