ಪ್ರಧಾನಿ ಮೋದಿಗೆ ಭವ್ಯ ಸ್ವಾಗತ

ಎರಡು ದಿನಗಳ ಭೇಟಿಗಾಗಿ ಬಾಂಗ್ಲಾದೇಶಕ್ಕೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ರಾಷ್ಟ್ರೀಯ ಹುತಾತ್ಮ ಯೋಧರ ಸ್ಮಾರಕಕ್ಕೆ ಭೇಟಿ ನೀಡಿ 1971ರ ಬಾಂಗ್ಲಾದೇಶ ವಿಮೋಚನೆಯ ಯುದ್ಧದಲ್ಲಿ ಮಡಿದ ಯೋಧರಿಗೆ ಗೌರವ ನಮನ ಸಲ್ಲಿಸಿದರು...
ಇಂದು ಬೆಳಗ್ಗೆ ಢಾಕಾದ ವಿಮಾನ ನಿಲ್ದಾಣಕ್ಕೆ ತಲುಪಿದ ಪ್ರಧಾನಿ ಮೋದಿಯವರನ್ನು ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಆದರದಿಂದ ಬರಮಾಡಿಕೊಂಡರು
ಇಂದು ಬೆಳಗ್ಗೆ ಢಾಕಾದ ವಿಮಾನ ನಿಲ್ದಾಣಕ್ಕೆ ತಲುಪಿದ ಪ್ರಧಾನಿ ಮೋದಿಯವರನ್ನು ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಆದರದಿಂದ ಬರಮಾಡಿಕೊಂಡರು

ಢಾಕಾ:ಎರಡು ದಿನಗಳ ಭೇಟಿಗಾಗಿ ಬಾಂಗ್ಲಾದೇಶಕ್ಕೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬಾಂಗ್ಲಾದೇಶದಲ್ಲಿರುವ ರಾಷ್ಟ್ರೀಯ ಹುತಾತ್ಮ ಯೋಧರ ಸ್ಮಾರಕಕ್ಕೆ ಭೇಟಿ ನೀಡಿ 1971ರ ಬಾಂಗ್ಲಾದೇಶ ವಿಮೋಚನೆಯ ಯುದ್ಧದಲ್ಲಿ ಮಡಿದ ಯೋಧರಿಗೆ ಗೌರವ ನಮನ ಸಲ್ಲಿಸಿದರು.

ಪ್ರಧಾನಿಯಾದ ಬಳಿಕ ಮೋದಿಯವರ ಮೊದಲ ಭೇಟಿ ಇದಾಗಿದ್ದು, ಇನ್ನು ಕೆಲವೇ ಹೊತ್ತಿನಲ್ಲಿ ಅವರು ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಅವರ ಜತೆ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ನಾಯಕರು ಅನೇಕ ಒಪ್ಪಂದಗಳಿಗೆ, ನಿಲುವಳಿಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.''ಭೂ ಗಡಿ ಒಪ್ಪಂದ'' ಕುರಿತು ತೀರ್ಮಾನಕ್ಕೆ ಬರುವುದು ಪ್ರಧಾನಿ ಮೋದಿಯವರ ಭೇಟಿಯ ಪ್ರಮುಖ ಉದ್ದೇಶವಾಗಿದೆ.

ನೆರೆ ದೇಶದ ಪ್ರಧಾನಿಯೊಬ್ಬರ ಭೇಟಿಯನ್ನು ಬಾಂಗ್ಲಾದ ಮಾಧ್ಯಮಗಳು, ಅಲ್ಲಿನ ರಾಜಕೀಯ ಪಕ್ಷಗಳು ಸ್ವಾಗತಿಸಿವೆ. ಬಾಂಗ್ಲಾದ ಜಮತ್-ಎ-ಇಸ್ಲಾಮಿ ಸಂಘಟನೆ ಮೋದಿಯವರ ಭೇಟಿಯನ್ನು ಸ್ವಾಗತಿಸಿದ್ದು, ಉಭಯ ನಾಯಕರ ಒಪ್ಪಂದದಿಂದ ಗಡಿ ಸಮಸ್ಯೆ, ಅಕ್ರಮ ಒಳನುಸುಳುವಿಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ ಎಂದು ಹೇಳಿದೆ.

ಭಾರತದ ಪ್ರಧಾನಿ ಭೇಟಿ ಐತಿಹಾಸಿಕವಾಗಿದ್ದು, ಉನ್ನತ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.''ಢಾಕಾ ಮೋದಿಯವರನ್ನು ಸ್ವಾಗತಿಸಲು ಸಜ್ಜಾಗಿದ್ದು, ಎರಡೂ ದೇಶಗಳ ಮಧ್ಯೆ ಲವಲವಿಕೆಯ ಪ್ರಮುಖ ಪ್ರಗತಿಗಳನ್ನು ನಿರೀಕ್ಷಿಸಲಾಗಿದೆ. ಅವರ ಈ ಭೇಟಿಯು ಅರ್ಥಬದ್ಧವಾಗಿದೆ ಎಂದು ಇನ್ನೊಂದು ಪತ್ರಿಕೆ ವರದಿ ಮಾಡಿದೆ.

 ಢಾಕಾಕ್ಕೆ ತೆರಳುವ ಮುನ್ನ ಟ್ವೀಟ್ ಮಾಡಿದ ಪ್ರಧಾನಿ, ಈ ಭೇಟಿಯಿಂದ ಎರಡು  ದೇಶಗಳ ಮಧ್ಯೆ ಸಂಬಂಧ ಇನ್ನೂ ಗಟ್ಟಿಗೊಳ್ಳುವುದಲ್ಲದೆ, ಜನರಿಗೆ ಅಧಿಕ ಲಾಭವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com