ದೆಹಲಿ ಸೋತದ್ದಕ್ಕೆ ಪ್ರತೀಕಾರ ತೀರಿಸುವ ಪ್ರಧಾನಿ ಮೋದಿ

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಹೀಗಾಗಿ ಲೆಫ್ಟಿನೆಂಟ್ ಗವರ್ನರ್ ಮೂಲಕ ದೆಹಲಿಗೆ ಮತ್ತು ಜನರ ವಿರುದ್ಧ ಪ್ರತೀಕಾರ ತೀರಿಸುತ್ತಿದ್ದಾರೆ ಎಂದು...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಹೀಗಾಗಿ ಲೆಫ್ಟಿನೆಂಟ್ ಗವರ್ನರ್ ಮೂಲಕ ದೆಹಲಿಗೆ ಮತ್ತು ಜನರ ವಿರುದ್ಧ ಪ್ರತೀಕಾರ ತೀರಿಸುತ್ತಿದ್ದಾರೆ ಎಂದು ದೆಹಲಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ. ಎನ್ ಡಿಟಿವಿಗೆ ಶುಕ್ರವಾರ ನೀಡಿದ ಸಂದ ರ್ಶನದಲ್ಲಿ ಅವರು ಮಾತನಾಡಿದ್ದಾರೆ.

ದೆಹಲಿಯ ಜನತೆ ಬಿಜೆಪಿಯನ್ನು ಬಿಟ್ಟು 5 ವರ್ಷಗಳ ಕಾಲ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿದ್ದಾರೆ. ಅದು ಮೋದಿಯವರಿಗೆ ಅರಗಿಸಲು ಆಗುತ್ತಿಲ್ಲ. ಆದರೆ, ದೇಶದ ಇತರ ಭಾಗದ ಜನರು ಬಿಜೆಪಿಗೆ ಮತ ಹಾಕಿದ್ದಾರೆ. ದಯವಿಟ್ಟು ನಮಗೆ ದೆಹಲಿ ಆಳಲು ಅವಕಾಶ ಕೊಡಿ. ನೀವು ದೇಶವನ್ನು ಆಳಿ. ಲೆಫ್ಟಿನೆಂಟ್ ಗರ್ವನರ್ ಮೂಲಕ ತೊಂದರೆ ಕೊಡಬೇಡಿ. ಇದು ಪ್ರಧಾನಿಗೆ ಒಳ್ಳೆಯದಲ್ಲ'' ಎಂದಿದ್ದಾರೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ವಿರುದ್ಧ ಹರಿಹಾಯ್ದ ``ಜಂಗ್ ಬಿಜೆಪಿಯ ಮತಗಟ್ಟೆ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ದೆಹಲಿ ಸಚಿವರನ್ನು ಭೇಟಿಯಾಗಲು ಅವರಿಗೆ ಸಮಯವಿಲ್ಲ. ಆದರೆ ಬಿಜೆಪಿ ಅಧ್ಯಕ್ಷ ಅಮಿತ್ ಷಾರ ಸೇವಕನಿಂದ ಕರೆ ಬಂದರೂ ತೆವಳಿಕೊಂಡು ಹೋಗುತ್ತಾರೆ'' ಎಂದು ದೂರಿದ್ದಾರೆ. ದೆಹಲಿ ರಾಜಭವನವನ್ನು ಬಿಜೆಪಿ ಪ್ರಧಾನ ಕಚೇರಿ ಯನ್ನಾಗಿಸಿಕೊಂಡಿದ್ದಾರೆ ಎಂದು ದೂರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com