ರಾಹುಲ್ ಗಾಂಧಿ
ದೇಶ
ಸೈನಿಕರ ಬಗ್ಗೆ ಕಾಳಜಿ ಇಲ್ಲದ ಮೋದಿ ಯೋಗದಲ್ಲಿ ಬ್ಯುಸಿ: ರಾಹುಲ್ ವಾಗ್ದಾಳಿ
ದೇಶದ ಸೈನಿಕರು ಒನ್ ರ್ಯಾಂಕ್ ಒಂದು ಪೆನ್ಷನ್ ಗಾಗಿ ಪರದಾಡುತ್ತಿದ್ದಾರೆ. ಆದರೆ ಸೇನಿಕರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಪ್ರಧಾನಿ ಮೋದಿ ಯೋಗ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ..
ಕೊಲ್ಕೋತಾ: ದೇಶದ ಸೈನಿಕರು ಒನ್ ರ್ಯಾಂಕ್ ಒಂದು ಪೆನ್ಷನ್ ಗಾಗಿ ಪರದಾಡುತ್ತಿದ್ದಾರೆ. ಆದರೆ ಸೇನಿಕರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಪ್ರಧಾನಿ ಮೋದಿ ಯೋಗ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಚುನಾವಣೆಗೂ ಮುನ್ನ ಪಂಜಾಬ್ ಮತ್ತು ಹರ್ಯಾಣ ತತ್ ಕ್ಷಣವೇ ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಸಂಬಂಧಿಸಿದ ಯಾವುದೇ ಕೆಲಸಗಳು ನಡೆದಿಲ್ಲ ಎಂದು ರಾಹುಲ್ ಆರೋಪಿಸಿದರು.
ಕೋಲ್ಕೋತ್ತಾದ ನೆಹರೂ ಇಂಡೋರ್ ಸ್ಟೇಡಿಯಂ ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಎನ್ ಡಿಎ ಸರ್ಕಾರ ಪರಿಯಚಸಿರುವ ಈ ಪೆನ್ಷನ್ ಯೋಜನೆ ಜಾರಿಗೆ ತರುವಂತೆ ಸೈನಿಕರು ಕಣ್ಣಿರು ಹಾಕುತ್ತಿದ್ದಾರೆ. ಆದರೆ ಇದ್ಯಾವುದರ ಪರಿವೆ ಇಲ್ಲದ ಮೋದಿ, ನಾನು ಯೋಗ ಮಾಡುವುದರಲ್ಲಿ ಬ್ಯುಸಿ ಇದ್ದೇನೆ. ಆಮೇಲೆ ಮಾತನಾಡಿ ಎಂದು ಹೇಳುತ್ತಿದ್ದಾರೆ ಎಂದು ರಾಹುಲ್ ದೂರಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ