ವಾಡಿಕೆಯಂತೇ ಮಳೆ; ಹವಾಮಾನ ಇಲಾಖೆಯ ಭವಿಷ್ಯ ಸುಳ್ಳು..!

ಈ ಬಾರಿ ವಾಡಿಕೆಗಿಂತ ಕಡಿಮೆ ಮುಂಗಾರು ಮಳೆ ಸುರಿಯಲಿದೆ ಎಂಬ ಕೇಂದ್ರ ಹವಾಮಾನ ಇಲಾಖೆ ನೀಡಿರುವ ವರದಿಯನ್ನು ಅಲ್ಲಗಳೆದಿರುವ ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೇಟ್ ವಾಡಿಕೆಯಂತೆ ಮಳೆ ಸುರಿಯಲಿದೆ..
ಮುಂಗಾರುಮಳೆ
ಮುಂಗಾರುಮಳೆ

ನವದೆಹಲಿ: ಈ ಬಾರಿ ವಾಡಿಕೆಗಿಂತ ಕಡಿಮೆ ಮುಂಗಾರು ಮಳೆ ಸುರಿಯಲಿದೆ ಎಂಬ ಕೇಂದ್ರ ಹವಾಮಾನ ಇಲಾಖೆ ನೀಡಿರುವ ವರದಿಯನ್ನು ಅಲ್ಲಗಳೆದಿರುವ ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೇಟ್ ವಾಡಿಕೆಯಂತೆ ಮಳೆ ಸುರಿಯಲಿದೆ ಎಂದು ಹೇಳಿದೆ.

ದೇಶದ ಏಕೈಕ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆಯಾಗಿರುವ ಸ್ಕೈಮೆಟ್‌ ಭಾರತದಲ್ಲಿ ಮುಂಗಾರುಮಳೆ ಸಾಮಾನ್ಯದಂತೆಯೇ ಸುರಿಯಲಿದ್ದು, ಎಲ್ ನಿನೋ ಪರಿಣಾಮದಿಂದಾಗಿ ಮಳೆ ಅಭಾವ ಎದುರಾಗುತ್ತದೆ ಎಂಬ ಹವಾಮಾನ ಇಲಾಖೆಯ ನೀಡಿದ್ದ ವರದಿಯನ್ನು ಸ್ಕೈಮೇಟ್ ಅಲ್ಲಗಳೆದಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ದೀರ್ಘಾವಧಿಯಲ್ಲಿ ಶೇ.102ರಷ್ಟು ಮಳೆ ಸುರಿಯಲಿದೆ. ಈ ಹಿಂದೆ 1967, 1977, 1997 ಮತ್ತು 2006ರಲ್ಲಿ ಎಲ್‌ನಿನೋ ಪ್ರಭಾವ ಕಾಣಿಸಿಕೊಂಡಿದ್ದರೂ, ಅರಬ್ಬೀ ಸಮುದ್ರದಲ್ಲಿ ಪೂರಕ ವಾತಾವರಣ ಸೃಷಿಯಿಂದ ಸಾಮಾನ್ಯ ಮುಂಗಾರು ಸುರಿದಿತ್ತು ಎಂದು ಸ್ಕೈಮೆಟ್‌ನ ಮುಖ್ಯ ಹವಾಮಾನ ಶಾಸ್ತ್ರಜ್ಞ ಜಿ.ಪಿ. ಶರ್ಮಾ ಹೇಳಿದ್ದಾರೆ.

ಅಲ್ಲದೆ ತಮ್ಮ ಈ ವರದಿಯನ್ನು ಸಮರ್ಥಿಸಿಕೊಂಡಿರುವ ಸ್ಕೈಮೇಟ್ ಸಂಸ್ಥೆ ತಾವು ಕಳೆದ ಮೂರು ವರ್ಷಗಳಿಂದ ನೀಡುತ್ತಿರುವ ಹವಾಮಾನ ಮುನ್ಸೂಚನೆ ನಿಖರವಾಗಿದೆ ಎಂದು ಹೇಳಿದೆ.

ಈ ಹಿಂದೆ ಕೇಂದ್ರ ಹವಾಮಾನ ಇಲಾಖೆ ನೀಡಿದ್ದ ವರದಿಯನ್ವಯ ಪ್ರಸಕ್ತ ಸಾಲಿನ ಋತುವಿನಲ್ಲಿ ಶೇ.88ರಷ್ಟು ಮಳೆ ಸುರಿಯಲಿದ್ದು, ಬರಗಾಲದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿತ್ತು. ಆದರೆ ಸ್ಕೈಮೆಟ್‌ ಸಂಸ್ಥೆ ಬಿಡುಗಡೆ ಮಾಡಿರುವ ನೂತನ ವರದಿಯು ಇದನ್ನು ಅಲ್ಲಗಳೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com