ನಂಜನಗೂಡು ಸೇರಿ ಎಂಟು ನೆಸ್ಲೆ ಘಟಕಗಳ ಮೇಲೆ ನಿಗಾ

ಕರ್ನಾಟಕದ ನಂಜನಗೂಡು ಸೇರಿದಂತೆ ನೆಸ್ಲೆ ಇಂಡಿಯಾದ ಎಂಟು ಸ್ಥಳಗಳ ಮೇಲೆ ಭಾರತೀಯ ಆಹಾರ ಗುಣಮಟ್ಟ ಮತ್ತು ಭದ್ರತಾ ಪ್ರಾಧಿಕಾರ (ಎಫ್ ಸ್‍ಎಸ್‍ಎಐ) ...
ಮ್ಯಾಗಿ ನೂಡಲ್ಸ್
ಮ್ಯಾಗಿ ನೂಡಲ್ಸ್

ನವದೆಹಲಿ: ಕರ್ನಾಟಕದ ನಂಜನಗೂಡು ಸೇರಿದಂತೆ ನೆಸ್ಲೆ ಇಂಡಿಯಾದ ಎಂಟು ಸ್ಥಳಗಳ ಮೇಲೆ ಭಾರತೀಯ ಆಹಾರ ಗುಣಮಟ್ಟ ಮತ್ತು ಭದ್ರತಾ ಪ್ರಾಧಿಕಾರ (ಎಫ್ ಸ್‍ಎಸ್‍ಎಐ) ನಿಗಾ ಇರಿಸಲು ಮುಂದಾಗಿದೆ. ಸೀಸ ಮತ್ತು ಮೊನೋಸೋಡಿಯಂ ಗ್ಲುಟಮೇಟ್ ಮಿತಿಗಿಂತ ಹೆಚ್ಚು ಕಂಡುಬಂದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮ್ಯಾಗಿ ಈಗಾಗಲೇ ಮ್ಯಾಗಿ ನೂಡಲ್ಸ್ ಅನ್ನು ಮಾರಾಟ ಮಾಡಂತೆ ಪ್ರಾಧಿಕಾರ ನೆಸ್ಲೆ ಇಂಡಿಯಾಗೆ ಸೂಚಿಸಿದೆ
ಎಂದು ``ಇಂಡಿಯನ್ ಎಕ್ಸ್‍ಪ್ರೆಸ್'' ವರದಿ ಮಾಡಿದೆ. ಇದರ ಜತೆಗೆ ಮ್ಯಾಗಿ ನೂಡಲ್ಸ್ ಗೆ ನೀಡಲಾಗಿರುವ ಉತ್ಪನ್ನ ಅನುಮೋದನಾ ಪ್ರಮಾಣ ಪತ್ರವನ್ನು ಏಕೆ ಹಿಂಪಡೆಯಬಾರದು ಎಂದೂ ಪ್ರಾಧಿಕಾರ ಪ್ರಶ್ನಿಸಿದೆ ಎಂದು ಅದು ವರದಿ ಮಾಡಿದೆ. ಇದಕ್ಕೆ ಅದು ಕಾರಣ ಕೂಡಬೇಕೆಂದಿದೆ. ನಂಜನಗೂಡು ಹೊರತುಪಡಿಸಿ ಪಂಜಾ ಬ್‍ನ ಮೋಗಾ, ಸಮಾಲ್ಕಾ (ಹರ್ಯಾಣ), ಚೋಲಾಡಿ (ತಮಿಳುನಾಡು), ಫೋಂಡಾ ಮತ್ತು ಬಿಚೊಲಿಮ್ (ಗೋವಾ), ಪಂತ್‍ನಗರ (ಉತ್ತರಾಖಂಡ)ಮತ್ತು ತಹ್ಲಿವಾಲ್ (ಹಿಮಾಚಲ ಪ್ರದೇಶ)ಗಳಲ್ಲಿ ನೆಸ್ಲೆ ಇಂಡಿಯಾ ಮ್ಯಾಗಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಪರಿಶೀಲನೆ ಆದೇಶ: ಮತ್ತೊಂದೆಡೆ ಮ್ಯಾಗಿ ಬಳಿಕ ಇತರ ಜನಪ್ರಿಯ ಬ್ರಾಂಡ್‍ಗಳ ನೂಡಲ್ಸ್‍ಗಳ ಗುಣಮಟ್ಟ ಪರೀಕ್ಷೆ ನಡೆಸಲು ಪ್ರಾಧಿಕಾರ ಸೋಮವಾರ ಆದೇಶಿಸಿದೆ.
ಟಾಪ್ ರಾಮೆನ್, ವೈ ವೈ (Wai Wai), ಯಮ್ಮಿ ಆ್ಯಂಡಿ ಫೂಡೆಲ್ಸ್ , ಐಟಿಸಿ, ಜಿಎಸ್‍ಕೆ ಸೇರಿದಂತೆ ಪ್ರಮುಖ ಕಂಪನಿಗಳ ಉತ್ಪನ್ನಗಳ ನೂಡಲ್ಸ್‍ಗಳನ್ನು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಾಧಿಕಾರ ಸೂಚಿಸಿದೆ. ಜೂ.19ರ ಒಳಗಾಗಿ ವರದಿ ಸಲ್ಲಿಸುವಂತೆ ಮನವಿ ಮಾಡಿದೆ. ಆದರೆ ಕೇಕ್ ಮತ್ತು ಮಸಾಲೆ ಅಥವಾ ಟೇಸ್ಟ್‍ಮೇಕರ್‍ಗಳನ್ನು ಪ್ರತ್ಯೇಕವಾಗಿ ಪರೀಕ್ಷೆ ನಡೆಸುವಂತೆ ಸುತ್ತೋಲೆ ಹೊರಡಿಸಿದೆ.

ಸರ್ಕಾರಕ್ಕೆ ಆದೇಶ: ಮ್ಯಾಗಿ ನೂಡಲ್ಸ್ ಮೇಲೆ ನಿಷೇಧ  ಹೇರುವ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಮುಖ್ಯ ನ್ಯಾಯಮೂರ್ತಿ
ಅಶೋಕ್ ಭೂಷಣ್ ಮತ್ತು ನ್ಯಾ.ಎ. ಎಂ.ಶಫೀಕ್ ನೇತೃತ್ವದ ನ್ಯಾಯಪೀಠ ಈ ಬಗ್ಗೆ ಶೀಘ್ರವೇ ಪ್ರಮಾಣ ಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಆದೇಶ ನೀಡಿದೆ.



ನಿರ್ಧಾರ ಮುಂದೂಡಿಕೆ
ಇದೇ ವೇಳೆ ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಮ್ಯಾಗಿ ಮೇಲೆ ನಿಷೇಧ ಹೇರುವ ನಿರ್ಧಾರವನ್ನು ಅಲ್ಲಿನ ಸರ್ಕಾರ ಮುಂದೂಡಿದೆ. ಮಿಜೋರಾಂನ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಸೋಮವಾರ ಈ ಮಾಹಿತಿ ನೀಡಿದೆ.

ನಾಲ್ಕು ಟನ್ ಮ್ಯಾಗಿ ನಾಶ: ಬೀಚ್ ರಾಜ್ಯ ಗೋವಾದಲ್ಲಿ ನಾಲ್ಕು ಟನ್‍ಗಳಷ್ಟು ಮ್ಯಾಗಿ ನೂಡಲ್ಸ್ ಅನ್ನು ನಾಶಗೊಳಿಸಲಾಗಿದೆ. ಹೀಗೆಂದು ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಮಾಹಿತಿ ನೀಡಿದ್ದಾರೆ. ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದರ ಜತೆಗೆ ಗೋವಾದಲ್ಲಿ ಕೂಡ ನೆಸ್ಲೆ ಇಂಡಿಯಾ ಉತ್ಪನ್ನದ ಮೇಲೆ ನಿಷೇಧ ಹೇರಲಾಗಿದೆ ಎಂದು ಪರ್ಸೇಕರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com