
ಚೆನ್ನೈ: ಪೈಲೆಟ್ ಸೇರಿ ಮೂವರು ಪ್ರಯಾಣಿಸುತ್ತಿದ್ದ ಕರಾವಳಿ ಗಸ್ತು ಪಡೆಯ ಹೆಲಿಕಾಪ್ಟರ್ ನಿನ್ನೆ ರಾತ್ರಿಯಿಂದ ನಾಪತ್ತೆಯಾಗಿದೆ.
ರಾತ್ರಿ 10.30ಕ್ಕೆ ಚೆನ್ನೈನ ಏರ್ ಬೇಸ್ ನಿಂದ ಪುದುಚೆರಿಗೆ ಹೊರಟಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿದೆ. ಸಮುದ್ರದಲ್ಲಿ ಪತನವಾಗಿರುವ ಶಂಕೆ ವ್ಯಕ್ತವಾಗಿದ್ದು, ನಾಪತ್ತೆಯಾಗಿರುವ ಹೆಲಿಕಾಪ್ಟರ್ ಗಾಗಿ ತೀವ್ರ ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಬಂಗಾಳಕೊಲ್ಲಿ ಸಮುದ್ರದಲ್ಲಿ ಹೆಲಿಕಾಪ್ಟರ್ ಗಾಗಿ ಶೋಧ ನಡೆಸಲಾಗುತ್ತಿದೆ. ಪುದುಚೇರಿ, ಕಡಲೂರು ವ್ಚಾಪ್ತಿಯಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಭಾರತೀಯ ನೌಕಾಸೇನೆಗೆ ಸೇರಿದ ಮೂರು ಹಡಗುಗಳು ಹಾಗೂ ಕರಾವಳಿ ಗಸ್ತು ಪಡೆಯ ವಿಮಾನಗಳಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ.
ಹೆಲಿಕಾಪ್ಟರ್ ನಾಪತ್ತೆಯಾದ ಹಿನ್ನಲೆಯಲ್ಲಿ, ಚೆನ್ನೈ ಏರ್ ಬೇಸ್ ನಲ್ಲಿ ನಡೆಯುತ್ತಿದ್ದ "ಆಪರೇಷನ್ ಆಮ್ಲ ಅಭ್ಯಾಸ' ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement