ಗ್ಲೂಕಾನ್-ಡಿನಲ್ಲಿ ಕೀಟ ಪತ್ತೆ

ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವ ಬೆನ್ನಲ್ಲೆ, ಶಕ್ತಿ ಪಾನಿಯ ಗ್ಲೂಕಾನ್ ಡಿ ಪೊಟ್ಟಣದಲ್ಲಿ ಕ್ರಿಮಿಗಳು ಪತ್ತೆಯಾಗಿರುವ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬುಲಂದಶಹರ್: ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವ ಬೆನ್ನಲ್ಲೆ, ಶಕ್ತಿ ಪಾನೀಯ ಗ್ಲೂಕಾನ್ ಡಿ ಪೊಟ್ಟಣದಲ್ಲಿ ಕ್ರಿಮಿಗಳು ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಮೂಲಗಳ ಪ್ರಕಾರ, ಬುಲಂದಶಹರ್ ನ ನಿವಾಸಿ ಬಬ್ಲು ಎಂಬವರು ಅಂಗಡಿಯಿಂದ 500 ಗ್ರಾಂ ನ ಗ್ಲೂಕಾನ್-ಡಿ ತಂದು ಕುಟುಂಬದವರ ಜೊತೆ ಸೇವಿಸಿದ್ದರು. ಕೆಲ ಹೊತ್ತಿನ ನಂತರ ಎಲ್ಲರಿಗೂ ವಾಂತಿಯಾಗಿದೆ. ಬಳಿಕ ಪೊಟ್ಟಣವನ್ನು ಪರಿಶೀಲಿಸಿದಾಗ ಅದರಲ್ಲಿ ಕ್ರಿಮಿಗಳಿರುವುದು ಕಂಡು ಬಂದಿದೆ. ಕೂಡಲೇ ಬಬ್ಲು ಅವರು ಔಷಧ ಸುರಕ್ಷಾ ಅಧಿಕಾರಿಗೆ ದೂರು ನೀಡಿದ್ದಾರೆ.

ಈ ಉತ್ಪನ್ನವನ್ನು ಪರಿಶೀಲನೆಗೆ ಕಳುಹಿಸಲಾಗಿದೆ. ಯಾವ ಅಂಗಡಿಯಲ್ಲಿ ಖರೀದಿಸಲಾಗಿದೆ ಎಂದು ಬಬ್ಲು ಮಾಹಿತಿ ನೀಡಿದ್ದು, ಅದೇ ಅಂಗಡಿಯಿಂದ ಮತ್ತೆ ನಾಲ್ಕು ಗ್ಲೂಕಾನ್ ಡಿ ಪೊಟ್ಟಣಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲು ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಗ್ಲೂಕಾನ್ ಡಿ ಯನ್ನು ಅಮೆರಿಕದ ಫಾರ್ಮಸಿಟಿಕಲ್ ಗೈಂಟ್ ಕಂಪನಿ ತಯಾರಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com