
ನವದೆಹಲಿ: ಅಗ್ಗದ ದರದಲ್ಲಿ ಟ್ಯಾಕ್ಸಿ ಸೇವೆ ಒದಗಿಸುವ ಮೂಲಕ ಜನಪ್ರಿಯತೆ ಗಳಿಸಿ ರುವ ಓಲಾ ಆನ್‍ಲೈನ್ ಟ್ಯಾಕ್ಸಿ ವೆಬ್‍ಸೈಟ್ ಗೆ ಮಾಹಿತಿ ಚೋರರು ಕನ್ನ ಹಾಕಿದ್ದಾರೆ. ಬಳಕೆದಾರರ ಕ್ರೆಡಿಟ್ ಕಾರ್ಡ್ ವಿವರ ಕದ್ದಿ ದ್ದಾಗಿ ಮಾಹಿತಿಚೋರರು ಹೇಳಿದ್ದರೆ, ಮುಖ್ಯ ಮಾಹಿತಿ ಯಾವುದೂ ಸೋರಿಕೆಯಾಗಿಲ್ಲ ಎಂದು ಓಲಾ ಮೂಲಗಳು ಸ್ಪಷ್ಟಪಡಿ ಸಿವೆ. ಓಲಾ ಅಪ್ಲಿ ಕೇಶನ್ ವಿನ್ಯಾಸ ತೀರಾ ಕಳಪೆಯಾಗಿದ್ದು, ಮಾಹಿತಿ ಕದಿಯೋಕೆ ಕಷ್ಟ ವಾಗಿಲ್ಲ. ಕಂಪನಿಯ ವೆಬ್‍ಸೈಟ್‍ಗೆ ಮಾತ್ರ ಕನ್ನ ಹಾಕಲಾಗಿದೆಯೇ ಮೊಬೈಲ್ ಆ್ಯಪ್ ಕೂಡ ದಾಳಿಗೆ ಒಳಗಾಗಿ ದೆಯೆ ಎಂಬುದು ಸ್ಪಷ್ಟವಾಗಿಲ್ಲ. ಈ ಕನ್ನ ಪ್ರಕರಣ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
Advertisement