
ಲಂಡನ್: ಕೀನ್ಯಾದ ಲಿಮುರು ನಗರದಲ್ಲಿ ಕೆಲ ಮಹಿಳೆಯರು ತಮ್ಮ ಗಂಡಂದಿರ ವಿರುದ್ಧ ವಿಚಿತ್ರ ಪ್ರತಿಭಟನೆ ನಡೆಸಿದ್ದಾರೆ.ಅದು ಮಿನಿ ಸ್ಕರ್ಟ್ ಪ್ರತಿಭಟನೆ! ಇದಕ್ಕೆ ಕಾರಣ ಗಂಡಂದಿರು ರಾತ್ರಿ ಮಂಚಕ್ಕೆ ಬಾರದೇ ಇರುವುದು! ಇಂಥ ಒಂದು ಕುತೂಹಲಕಾರಿ ವರದಿಯನ್ನು ``ದ ಇನ್ ಸೈಡರ್.ಆರ್ಗ್'' ಪ್ರಕಟಿಸಿದೆ. ಕಿಯಾಂಬು ಕೌಂಟಿಯಲ್ಲಿ ಕುಡಿತದ ದಾಸ್ಯಕ್ಕೆ ಬೀಳುವ ಗಂಡು ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಅವರು ಹೆಂಡತಿಯರ ಜತೆಗೆ ರಾತ್ರಿ ಕಳೆಯುವುದೇ ಅಪರೂಪ ಆಗಿದೆ. ಇದರಿಂದಾಗಿ ವಿವಾಹಿತ ಹೆಣ್ಣುಮಕ್ಕಳು ತಾಯಿಯಾಗುವ ಭಾಗ್ಯದಿಂದ ವಂಚಿತರಾಗುತ್ತಿದ್ದಾರೆ. ಗಂಡುಮಕ್ಕಳು ಈ ವಿಚಾರ ವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಹೊರದೇಶಕ್ಕೆ ಹೋಗಿ ಪುರುಷರನ್ನು ಮದುವೆ ಯಾಗುವುದಾಗಿಯೂ ಎಚ್ಚರಿಸಿದ್ದಾರೆ ಪ್ರತಿಭಟನಾಕಾರರು.
Advertisement