ನವದೆಹಲಿ: ನಕಲಿ ಕಾನೂನು ಪ್ರಮಾಣ ಪತ್ರ ವಿವಾದದಲ್ಲಿ ಸಿಲುಕಿ ಸದ್ಯ ಸೆರೆವಾಸದಲ್ಲಿರುವ ದೆಹಲಿ ಮಾಜಿ ಕಾನೂನು ಮಂತ್ರಿ ಜಿತೇಂದ್ರ ಸಿಂಗ್ ತೋಮಾರ್ ಸ್ಥಾನಕ್ಕೆ ಕಪಿಲ್ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ.
ದೆಹಲಿ ಜಲಮಂಡಳಿ ಉಪಾಧ್ಯಕ್ಷರಾಗಿದ್ದ ಆಪ್ ಶಾಸಕ ಕಪಿಲ್ ಮಿಶ್ರಾ ಅವರನ್ನು ಕಾನೂನು ಸಚಿವರನ್ನಾಗಿ ನೇಮಿಸಲಾಗಿದೆ. ದೆಹಲಿಯ ಕಾರವಾಲ್ ನಗರ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಲವಾರು ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರಾಗಿ ದುಡಿದಿರುವ ಕಪಿಲ್ ಮಿಶ್ರಾ ಕಾಮನ್ ವೆಲ್ತ್ ಗೇಮ್ಸ್ ಹಗರಣದ ವಿರುದ್ಧ ಧನಿಯೆತ್ತಿದವರಲ್ಲಿ ಮೊದಲಿಗರಾಗಿದ್ದಾರೆ.
ನಕಲಿ ಪ್ರಮಾಣ ಪತ್ರ ವಿವಾದದಲ್ಲಿ ಬಂಧಿತರಾಗಿರುವ ಜಿತೇಂದ್ರ ತೋಮಾರ್ ಸದ್ಯ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
Advertisement