ಪಾಕ್ ಆಸ್ಥಿರಗೊಳಿಸಲು ಭಾರತ ಯತ್ನ: ಮುಷರಫ್ ಆರೋಪ

ಭಾರತ ಸರ್ಕಾರ ಪಾಕಿಸ್ತಾನವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಫರ್ವೇಜ್ ಮುಷರಫ್ ಹೇಳಿದ್ದಾರೆ.
ಪಾಕ್ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ (ಸಂಗ್ರಹ ಚಿತ್ರ)
ಪಾಕ್ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಭಾರತ ಸರ್ಕಾರ ಪಾಕಿಸ್ತಾನವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಫರ್ವೇಜ್ ಮುಷರಫ್ ಹೇಳಿದ್ದಾರೆ.

ಮಯನ್ಮಾರ್ ನಲ್ಲಿ ಭಾರತೀಯ ಸೇನೆ ನಡೆಸಿದ ಸೇನಾ ಕಾರ್ಯಾಚರಣೆ ಕುರಿತಂತೆ ಇಂದು ಭಾರತ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ವ್ಯಾಖ್ಯಾನಗಳು ಹೊರ ಬೀಳುತ್ತಿದ್ದಂತೆಯೇ ಪಾಕ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮುಷರಫ್, ಪಾಕಿಸ್ತಾನದ ಬಳಿ ಇರುವ ಅಣು ಆಯುಧಗಳು ದೇಶದ ರಕ್ಷಣೆಗಷ್ಟೇ. ಅದ್ದೂರಿ ಸಂದರ್ಭಗಳಲ್ಲಿ ಬಳಸಲು ಅಲ್ಲ ಎನ್ನುವ ಮೂಲಕ ಭಾರತಕ್ಕೆ ಪರೋಕ್ಷ ಬೆದರಿಕೆ ಹಾಕಿದ್ದಾರೆ.

ಇಸ್ಲಾಮಾಬಾದ್ ನಲ್ಲಿ ಮಾತನಾಡಿದ ಮುಷರಫ್, ಪಾಕಿಸ್ತಾನದ ಅಣ್ವಸ್ತ್ರ ನಾಶಕ್ಕೆ ಭಾರತ ಯೋಜನೆ ಹಾಕಿಕೊಂಡಿದ್ದು, ಇದೇ ಕಾರಣಕ್ಕಾಗಿ ಪಾಕ್ ವಿರುದ್ಧ ಭಾರತ ಆಕ್ರಣಕಾರಿ ಧೋರಣೆಯನ್ನು ಅನುಸರಿಸುತ್ತಿದೆ. ನಾವು ಯಾವುದೇ ಕಾರಣಕ್ಕೂ ನಮ್ಮ ಪರಮಾಣು ಸಾಮರ್ಥ್ಯವನ್ನು ಬಳಕೆ ಮಾಡಲು ಬಯಸುವುದಿಲ್ಲ. ಆದರೆ ನಮ್ಮ ಭದ್ರತೆ ಆತಂಕಕ್ಕೆ ಸಿಲುಕಿದಾಗ ಇದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

ಅಲ್ಲದೆ, ನಮ್ಮ ವಿರುದ್ಧ ದಾಳಿಗಳನ್ನಾಗಲಿ ಅಥವಾ ನಮ್ಮ ಆಂತರಿಕ ಭದ್ರತೆಯನ್ನು ಹಾಳು ಮಾಡುವ ಪ್ರಯತ್ನವನ್ನಾಗಲಿ ಮಾಡಬೇಡಿ. ಏಕೆಂದರೆ ನಮ್ಮದು ಸಾಮಾನ್ಯ ದೇಶವಲ್ಲ. ವಿಶ್ವದ ಬಲಾಢ್ಯ ಸೇನೆಯಲ್ಲಿ ಪಾಕಿಸ್ತಾನ ಸೇನೆ ಕೂಡ ಒಂದು. ಅಣು ಸಾಮರ್ಥ್ಯ ಪ್ರಮುಖ ರಾಷ್ಟ್ರಗಳಲ್ಲಿ ಪಾಕಿಸ್ತಾನ ಪ್ರಮುಖ ರಾಷ್ಟ್ರ. ನಾವು ಬಹಳ ಆತ್ಮವಿಶ್ವಾಸದಿಂದ ಇದ್ದು, ಪಾಕಿಸ್ತಾನವನ್ನು ಅಣ್ವಸ್ತ್ರ ರಹಿತವನ್ನಾಗಿ ಮಾಡುವ ಕನಸು ಕಾಣುತ್ತಿರುವ ಭಾರತದ ಕನಸು ನನಸಾಗಲು ನಾವು ಬಿಡುವುದಿಲ್ಲ ಎಂದು ಮುಷರಫ್ ಹೇಳಿದ್ದಾರೆ.

ಒಟ್ಟಾರೆ ಪಾಕಿಸ್ತಾನದ ಮಾಜಿ ಅಧ್ಯಕ್ಷರ ಈ ಮಾತುಗಳನ್ನು ಕೇಳಿದರೆ ಮಯನ್ಮಾರ್ ಕಾರ್ಯಾಚರಣೆ ಬಳಿಕ ಭಾರತದ ಬಗ್ಗೆ ಪಾಕಿಸ್ತಾನ ಒಂದು ರೀತಿಯ ಅಳುಕು ಶುರುವಾಗಿದ್ದು, ಅದನ್ನು ಮರೆ ಮಾಚಲು ಇಂತಹ ನಾಯಕರು ವಿವಿಧ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದೆನಿಸುತ್ತದೆ. ಇನ್ನು ಪಾಕಿಸ್ತಾನವನ್ನು ಅಸ್ಥಿರಗೊಳಿಸುವ ವಿಚಾರಕ್ಕೆ ಬಂದರೆ ಅಧಿಕಾರದ ಲಾಲಸೆಯಿಂದಾಗಿ ಪಾಕಿಸ್ತಾನದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರುವ ಮೂಲಕ ಆ ದೇಶದಲ್ಲಿ ಆಸ್ಥಿರತೆ ಸೃಷ್ಟಿಸಿದ್ದು ಇದೇ ಮುಷರಫ್ ಎಂಬುದನ್ನು ಯಾರೂ ಮರೆತಿಲ್ಲ.

ಪ್ರಸ್ತುತ 120 ಅಣ್ವಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನ 2020ರ ವೇಳೆಗೆ ಇದನ್ನು ದುಪ್ಪಟ್ಟು ಮಾಡಿಕೊಳ್ಳುವ ಹುನ್ನಾರದಲ್ಲಿದೆ. ವಿಶ್ವ ಸಂಸ್ಥೆಯ ವೀಕ್ಷಣೆಯ ನಡುವೆಯೂ ಒಳಗಿಂದೊಳಗೇ ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಪಾಕಿಸ್ತಾನ ಹೆಚ್ಚಿಸಿಕೊಳ್ಳುತ್ತಲೇ ಇದೆ. ಯುದ್ಧದ ಆಸೆ ಇಲ್ಲದೆ ಇದ್ದರೆ ಪಾಕಿಸ್ತಾನವೇಕೆ ತನ್ನ ಅಣ್ವಸ್ತ್ರ ಯೋಜನೆಗಳನ್ನು ನಿರಂತರವಾಗಿ ನಡೆಸುತ್ತಿದೆ..?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com