ಜಯಲಲಿತಾ
ದೇಶ
ಜಯಲಲಿತಾರಿಂದ 94 ಕೋಟಿ ರೂ ವೆಚ್ಚದ ಆರೋಗ್ಯ ಸೌಲಭ್ಯಗಳಿಗೆ ಚಾಲನೆ
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಜೂ.12 ರಂದು 94 ಕೋಟಿ ರೂ ವೆಚ್ಚದ ವಿವಿಧ ಆರೋಗ್ಯ ಸೇವೆಗಳಿಗೆ ಚಾಲನೆ ನೀಡಿದ್ದಾರೆ.
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಜೂ.12 ರಂದು 94 ಕೋಟಿ ರೂ ವೆಚ್ಚದ ವಿವಿಧ ಆರೋಗ್ಯ ಸೇವೆಗಳಿಗೆ ಚಾಲನೆ ನೀಡಿದ್ದಾರೆ.
ವೈದ್ಯಕೀಯ ಉಪಕರಣಗಳು, ಆಂಬುಲೆನ್ಸ್ ಗಳಿಗೆ ಚಾಲನೆ ನೀಡುವುದರ ಜೊತೆಗೆ ಸುಮಾರು 80 .92 ಕೋಟಿ ವೆಚ್ಚದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಆಸ್ಪತ್ರೆಯ ಕಟ್ಟಗಳನ್ನೂ ಜಯಲಲಿತಾ ಉದ್ಘಾಟನೆ ಮಾಡಿದ್ದಾರೆ. 108 ಆಂಬುಲೆನ್ಸ್ ಸೇವೆಯಡಿ 25 ಆಂಬುಲೆನ್ಸ್ ವಾಹನಗಳಿಗೆ ಚಾಲನೆ ನೀಡಲಾಗಿದ್ದು ಈಗಾಗಲೇ ಇದ್ದ 726 ಆಂಬುಲೆನ್ಸ್ ಗಳಿಗೆ ಹೊಸದಾಗಿ 25 ಆಂಬುಲೆನ್ಸ್ ಸೇರ್ಪಡೆಯಾಗಿದೆ.
ಕಟ್ಟಡಗಳನ್ನು ಉದ್ಘಾಟನೆ ಮಾಡುವುದರೊಂದಿಗೆ ತಮಿಳುನಾಡು ಸಿ.ಎಂ ಜಯಲಲಿತಾ ವೀಡಿಯೊ ಕಾನ್ಫರೆನ್ಸ್ ಸೌಲಭ್ಯ ಹೊಂದಿರುವ ಎಂ.ಆರ್.ಐ ಸ್ಕ್ಯಾನ್ ಯಂತ್ರವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಒಟ್ಟಾರೆ ರಾಜ್ಯಾದ್ಯಂತ 94.72 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಆರೋಗ್ಯ ಸೇವೆಯ ಉಪಕರಣಗಳನ್ನು ಜಯಲಲಿತಾ ಉದ್ಘಾಟಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ