ಕೇರಳದ 6 ನದಿಗಳಲ್ಲಿ ಮರಳು ಗಣಿಗಾರಿಕೆ ನಿಷೇಧ

ನದಿಗಳ ಸಂರಕ್ಷಣೆ ಕುರಿತಂತೆ ದಿಟ್ಟ ನಿರ್ಧಾರ ಕೈಗೊಂಡಿರುವ ಕೇರಳ ಸರ್ಕಾರ ತನ್ನ ರಾಜ್ಯದ 6 ನದಿಗಳಲ್ಲಿನ ಮರಳು ಗಣಿಗಾರಿಕೆಯನ್ನು ನಿಷೇಧಿಸುವುದಾಗಿ ಶುಕ್ರವಾರ ಹೇಳಿದೆ...
ಕೇರಳದ ನದಿಗಳಲ್ಲಿ ಮರಳು ಗಣಿಗಾರಿಕೆ ನಿಷೇಧ
ಕೇರಳದ ನದಿಗಳಲ್ಲಿ ಮರಳು ಗಣಿಗಾರಿಕೆ ನಿಷೇಧ

ತಿರುವನಂತಪುರ: ನದಿಗಳ ಸಂರಕ್ಷಣೆ ಕುರಿತಂತೆ ದಿಟ್ಟ ನಿರ್ಧಾರ ಕೈಗೊಂಡಿರುವ ಕೇರಳ ಸರ್ಕಾರ ತನ್ನ ರಾಜ್ಯದ 6 ನದಿಗಳಲ್ಲಿನ ಮರಳು ಗಣಿಗಾರಿಕೆಯನ್ನು ನಿಷೇಧಿಸುವುದಾಗಿ ಶುಕ್ರವಾರ ಹೇಳಿದೆ.

ಮುಂದಿನ 3 ವರ್ಷಗಳ ಅವಧಿಗೆ 6 ನದಿಗಳಲ್ಲಿ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಹಾಗೂ 5 ನದಿಗಳಲ್ಲಿ ನಿಯಂತ್ರಿತ ಮರಳು ಗಣಿಗಾರಿಕೆಗೆ ಅವಕಾಶ ನೀಡಲು ಕೇರಳ ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ನದಿ ಪಾತ್ರಗಳ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯನ್ವಯ ಸರ್ಕಾರ ಈ ಕ್ರಮ ಕೈಗೊಂಡಿದೆ. ನೆಯ್ಯಾರ್, ವಾಮನಪುರಂ, ಕಲ್ಲಾಡ, ಕುಟ್ಟಿಯಾಡಿ, ಕಬಾನಿ ಮತ್ತು ಚಂದ್ರಗಿರಿ ನದಿಗಳಲ್ಲಿ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಈ ನದಿಗಳ ಪಾತ್ರದಲ್ಲಿ ಮರಳೇ ಇಲ್ಲದಂತಾಗಿರುವ ಕಾರಣ ಈ ಕ್ರಮ ಅನಿವಾರ್ಯವಾಗಿದೆ ಎಂದು ಕೇರಳ ಸರ್ಕಾರ ಹೇಳಿದೆ. ಇನ್ನು ಚಾಲಿಯಾರ್, ಪಂಪಾ, ಕಡಲ್ಕುಂಡಿ, ಇತ್ತಿಕ್ಕರ ಮತ್ತು ಪೆರೆಯಾರ್ ನದಿ ಪಾತ್ರಗಳಲ್ಲಿ ನಿರ್ಧಿಷ್ಟ ಪ್ರಮಾಣದ ಮರಳು ಗಣಿಗಾರಿಕೆಗೆ ಮಾತ್ರ ಅವಕಾಶ ಕೊಟ್ಟಿರುವುದಾಗಿ ಕೇರಳ ಸರ್ಕಾರ ಸ್ಪಷ್ಟಪಡಿಸಿದೆ. ಮರುಳು ಗಣಿಗಾರಿಕೆ ಸಂಬಂಧ ಕೇರಳದ ಪರಿಸರ ವಿಜ್ಞಾನ, ಜೀವವಿಜ್ಞಾನ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಪರಿಶೋಧ ನಡೆಸಿ ಸರ್ಕಾರಕ್ಕೆ ವರದಿ ನೀಡಿದ ಬಳಿಕ ಕೇರಳ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com