ದೆಹಲಿ ಪೌರ ಕಾರ್ಮಿಕರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ದೆಹಲಿ ಪೌರ ಕಾರ್ಮಿಕರ ಧರಣಿ ನಡೆಸುತ್ತಿದ್ದು, ಇಂದು ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್...
ದೆಹಲಿ ಪೌರ ಕಾರ್ಮಿಕರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ನವದೆಹಲಿ: ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ದೆಹಲಿ ಪೌರ ಕಾರ್ಮಿಕರ ಧರಣಿ ನಡೆಸುತ್ತಿದ್ದು, ಇಂದು ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನೌಕರರನ್ನು ಸಮಸ್ಯೆಯನ್ನು ಆಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇದು ನಮಗೆ ಸಂಬಂಧಿಸಿಲ್ಲ ಎಂದು ಹೇಳುತ್ತಿದೆ. ಇನ್ನು ಆಪ್ ಸರ್ಕಾರ ಕೂಡ ವ್ಯತಿರಿಕ್ತ ಧೋರಣೆಯನ್ನು ಅನುಸರಿಸುತ್ತಿದೆ. ಹೀಗಾದರೆ ಕಾರ್ಮಿಕರು ಯಾರನ್ನು ನಂಬಬೇಕು ಎಂದು ಪ್ರಶ್ನಿಸಿದರು.

ಕಳೆದ 10 ದಿನಗಳಿಂದ ರಸ್ತೆಬದಿಯಲ್ಲೇ 15 ಸಾವಿರ ಟನ್‌ಗೂ ಅಧಿಕ ತೂಕದ ತ್ಯಾಜ್ಯವನ್ನು ಎಸೆದು ಪ್ರತಿಭಟನೆ ನಡೆಸುತ್ತಿರುವ 12 ಸಾವಿರಕ್ಕೂ ಅಧಿಕ ಪೌರಕಾರ್ಮಿಕರು ಸಂಬಳ ಸಿಗುವವರೆಗೆ ಪ್ರತಿಭಟಿಸಲು ನಿರ್ಧರಿಸಿ ಬೀದಿಗಿಳಿದಿದ್ಧಾರೆ. ಇದರಿಂದ ನಗರದಲ್ಲಿ ಆರೋಗ್ಯ ಸಮಸ್ಯೆ ಆರಂಭವಾಗಿದೆ.

ಇನ್ನು ರಾಹುಲ್ ಗಾಂಧಿ ಅವರು ಮೂವರು ಮೇಯರ್‌ಗಳೊಂದಿಗೆ ಮಾತುಕತೆ ನಡೆಸಿದ್ದು, ಆಪ್ ಸರ್ಕಾರ ಸಂಬಳ ಪಾವತಿಗೆ ಸಮ್ಮತಿಸಿದ್ದು ಶೀಘ್ರವೇ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com