ನೂರಾರು ಮಂದಿ ನಿವೃತ್ತ ಯೋಧರು ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದರು.
ದೇಶ
ಮಾಜಿ ಯೋಧರಿಂದ ಪ್ರತಿಭಟನೆ
ಸಮಾನ ಶ್ರೇಣಿ,ಸಮಾನ ಪಿಂಚಣಿ ಯೋಜನೆಯನ್ನು ವಿಳಂಬ ಮಾಡದೇ ಶೀಘ್ರವೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ನೂರಾರು ಮಂದಿ ನಿವೃತ್ತ ಮಿಲಿಟರಿ ಯೋಧರು ದೆಹಲಿಯ ಜಂತರ್ ಮಂತರ್ ನಲ್ಲಿ ಭಾನುವಾಗ ಪ್ರತಿಭಟನೆ ನಡೆಸಿದರು...
ನವದೆಹಲಿ: ಸಮಾನ ಶ್ರೇಣಿ,ಸಮಾನ ಪಿಂಚಣಿ ಯೋಜನೆಯನ್ನು ವಿಳಂಬ ಮಾಡದೇ ಶೀಘ್ರವೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ನೂರಾರು ಮಂದಿ ನಿವೃತ್ತ ಯೋಧರು ದೆಹಲಿಯ ಜಂತರ್ ಮಂತರ್ ನಲ್ಲಿ ಭಾನುವಾಗ ಪ್ರತಿಭಟನೆ ನಡೆಸಿದರು.
ಭಾರತೀಯ ಮಾಜಿ ಯೋಧರ ಸಂಘಟನೆ ಪ್ರತಿಭಟನೆಯನ್ನು ಆಯೋಜಿಸಿದ್ದು, ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಉಪವಾಸ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಯೋಜನೆ ಜಾರಿಗೊಳಿಸುವಲ್ಲಿ ಸಚಿವರ ಸಲಹೆಗಾರರು ಕಾರಣ ಎಂದು ಸಂಘಟನೆಯ ಖಜಾಂಜಿ ವಾಯುಪಡೆಯ ಮಾಜಿ ಪೈಲಟ್ ಆರೋಪಿಸಿದ್ದಾರೆ.
ಆರ್ ಎಸ್ ಎಸ್ ಗೆ ಹತ್ತಿರವೆಂದು ಪರಿಗಣಿಸಿರುವ ನಿವೃತ್ತ ಯೋಧರ ಗುಂಪು, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದು, ಸಮಾನ ಶ್ರೇಣಿ,ಸಮಾನ ಪಿಂಚಣಿ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸಿ 25 ಲಕ್ಷ ಮಾಜಿ ಸೈನಿಕರ ವಿಶ್ವಾಸಕ್ಕೆ ಧಕ್ಕೆ ತರಬೇಡಿ ಎಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ