ಅಖಿಲ ಭಾರತ ವೈದ್ಯಕೀಯ-ಪೂರ್ವ ಪ್ರವೇಶ ಮರು ಪರೀಕ್ಷೆಗೆ ಹೆಚ್ಚಿನ ಕಾಲಾವಕಾಶ ಕೋರಿರುವ ಸಿಬಿಎಸ್ ಇ
ದೇಶ
ನಾಲ್ಕು ವಾರಗಳಲ್ಲಿ ಮರು ಪರೀಕ್ಷೆ ಅಸಾಧ್ಯ: ಸಿಬಿಎಸ್ ಇ
ಅಖಿಲ ಭಾರತ ವೈದ್ಯಕೀಯ-ಪೂರ್ವ ಪ್ರವೇಶ ಮರು ಪರೀಕ್ಷೆಯನ್ನು ನಾಲ್ಕು ವಾರಗಳೊಳಗೆ ನಡೆಸಲು ಸಾಧ್ಯವಿಲ್ಲ. ಹೆಚ್ಚಿನ ಕಾಲಾವಕಾಶ ಕೋರಿ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲಾಗುವುದು ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ ಇ) ತಿಳಿಸಿದೆ...
ನವದೆಹಲಿ: 2015ನೇ ಸಾಲಿನ ಅಖಿಲ ಭಾರತ ವೈದ್ಯಕೀಯ-ಪೂರ್ವ ಪ್ರವೇಶ ಮರು ಪರೀಕ್ಷೆಯನ್ನು ನಾಲ್ಕು ವಾರಗಳೊಳಗೆ ನಡೆಸಲು ಸಾಧ್ಯವಿಲ್ಲ. ಹೆಚ್ಚಿನ ಕಾಲಾವಕಾಶ ಕೋರಿ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲಾಗುವುದು ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ ಇ) ತಿಳಿಸಿದೆ.
ಪರೀಕ್ಷೆ ನಡೆಸಲು ಪೂರ್ವ ತಯಾರಿಗೆ ಏಳು ತಿಂಗಳ ಸಮಯಾವಕಾಶ ಬೇಕು. ಹಾಗಾಗಿ ತರಾತುರಿಯಲ್ಲಿ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಮಂಡಳಿ ತಿಳಿಸಿದೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಸಿಬಿಎಸ್ ಇಯ ಅಧಿಕೃತ ಅಧ್ಯಕ್ಷ ಸತ್ ಬೀರ್ ಬೇಡಿ, ಒಂದು ತಿಂಗಳಲ್ಲಿ ಮರು ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಮರು ಪರೀಕ್ಷೆಗೆ ಆಗಸ್ಟ್ ತಿಂಗಳಲ್ಲಿ ತಯಾರಿ ನಡೆಸಲು ಆರಂಭಿಸಿದರೆ ಕನಿಷ್ಠ ಏಳು ತಿಂಗಳು ಬೇಕು ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ