ನಾನು ಒಬ್ಬ ಪವಿತ್ರ ಮುಸಲ್ಮಾನ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

ಸದಾ ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಈಗ ತಮ್ಮ ವರಸೆ ಬದಲಿಸಿಕೊಂಡಿದ್ದಾರೆ. ತಾನೊಬ್ಬ ನಿಜವಾದ ಮುಸಲ್ಮಾನ...
ಸಾಕ್ಷಿ ಮಹಾರಾಜ್
ಸಾಕ್ಷಿ ಮಹಾರಾಜ್
Updated on: 

ನವದೆಹಲಿ: ಸದಾ ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಈಗ ತಮ್ಮ ವರಸೆ ಬದಲಿಸಿಕೊಂಡಿದ್ದಾರೆ. ತಾನೊಬ್ಬ ನಿಜವಾದ ಮುಸಲ್ಮಾನ. ಪ್ರವಾದಿ ಮೊಹಮ್ಮದರು ಮಹಾನ್ ಯೋಗಿಗಳಾಗಿದ್ದರು ಎಂದು ಹೇಳಿದ್ದಾರೆ.

ಮುಸ್ಲಿಂರ ಪವಿತ್ರ ಇಸ್ಲಾಂ ನಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರು ಮೊಹಮ್ಮದ್ ಅವರದ್ದು. ನನ್ನ ಪ್ರಕಾರ ಮೊಹಮ್ಮದ್ ಸಾಹೇಬರು ಒಬ್ಬ ಶ್ರೇಷ್ಠ ಯೋಗಿ. ಇಮಾನ್(ಗೌರವ) ಹೊಂದಿರುವ ಮುಸ್ಲಿಮನೇ ಮುಸಲ್ಮಾನ್ ಎಂಬುದು ನನ್ನ ಅಭಿಪ್ರಾಯ. ಹೀಗಾಗಿ ನಾನೊಬ್ಬ ನಿಜವಾದ ಮುಸ್ಲಿಂ ಎಂದು ಸಾಕ್ಷಿ ಮಹಾರಾಜ್ ವಿವರಿಸಿದ್ದಾರೆ.

ಸೂರ್ಯನಮಸ್ಕಾರವನ್ನು ವಿರೋಧಿಸುವವರು ದೇಶ ಬಿಡಿ ಇಲ್ಲವೆ. ಸಮುದ್ರದಲ್ಲಿ ಮುಳುಗಿಸಬೇಕು ಎಂದು ಹೇಳಿದ್ದ ಯೋಗಿ ಆದಿತ್ಯನಾಥರಿಗೆ ಉತ್ತರ ಪ್ರದೇಶ ಸಚಿವ ಅಜಮ್ ಖಾನ್ ನಮಾಜ್ ಮಾಡುವಂತೆ ಸವಾಲು ಹಾಕಿದ್ದಕ್ಕೆ ಸಾಕ್ಷಿ ಮಹಾರಾಜ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಹಲವು ಸಂಸ್ಕೃತಿಗಳನ್ನು ಗೌರವಿಸುವ ಹಿಂದುಗಳಿಗೆ ಅಲ್ಲಾಹು ಹೆಸರು ಹೇಳಲು ಯಾವುದೇ ಸಮಸ್ಯೆ ಇಲ್ಲ. ಆದರೆ ಅಜಮ್ ಖಾನ್ ಗೆ ಗುಂಡಿಗೆ ಇದ್ದರೆ ಜೈ ಶ್ರೀರಾಮ್ ಎಂದು ಹೇಳಿ ನಿಜವಾದ ಭಾರತೀಯ ಎನಿಸಿಕೊಳ್ಳಲಿ ಎಂದು ಸಾಕ್ಷಿ ಮಹಾರಾಜ್ ಪ್ರತಿಸವಾಲು ಹಾಕಿದ್ದಾರೆ.

ಯೋಗಿ ಆದಿತ್ಯನಾಥ್ ಇದೀಗ, ಯೋಗ ಮತ್ತು ಸೂರ್ಯ ನಮಸ್ಕಾರವನ್ನು ಯಾರು ವಿರೋಧಿಸುತ್ತಾರೋ ಅಂತಹವರು ಭಾರತ ಬಿಟ್ಟು ತೊಲಗಲಿ ಇಲ್ಲವೇ ಸಮುದ್ರದಲ್ಲಿ ಮುಳುಗಿಸಬೇಕು ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com